ಪ್ರಧಾನಿ ನರೇಂದ್ರ ಮೋದಿ 
ದೇಶ

ಕಾಂಗ್ರೆಸ್-ಬರ ಅವಳಿ ಸಹೋದರರಿದ್ದಂತೆ, ಕಾಂಗ್ರೆಸ್ ಹೋದಲ್ಲೆಲ್ಲಾ ಬರವೂ ಇರುತ್ತೆ: ಮೋದಿ

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯ ಧಾಟಿಯಲ್ಲಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಬರ ಎರಡೂ ಅವಳಿ ಸಹೋದರರಿದ್ದಂತೆ, ಕಾಂಗ್ರೆಸ್ ಹೋದಲ್ಲೆಲ್ಲಾ ಬರವೂ ಇದ್ದೇ ಇರುತ್ತದೆ...

ಬಾರ್ಮರ್: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯ ಧಾಟಿಯಲ್ಲಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಬರ ಎರಡೂ ಅವಳಿ ಸಹೋದರರಿದ್ದಂತೆ, ಕಾಂಗ್ರೆಸ್ ಹೋದಲ್ಲೆಲ್ಲಾ ಬರವೂ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. 
ರಾಜಸ್ತಾನದ ಬಾರ್ಮರ್ ನಲ್ಲಿ ತೈಲ ಸಂಸ್ಕರಣಾಗಾರ ಉದ್ಘಾಟನೆ ಮಾಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವರು ಬಾರ್ಮರ್ ಸಂಸ್ಕರಣಾಗಾರದ ಬಗ್ಗೆ ಜನರನ್ನು ದಾರಿ ತಪ್ಪಿಸಿದ್ದರು, ಅಂತಹವರು ದೇಶವನ್ನು ವರ್ಷಗಳ ಕಾಲ ವಿವಿಧ ವಿಷಯಗಳಲ್ಲಿ ದಾರಿ ತಪ್ಪಿಸಿದ್ದಾರೆ. 
ಇದೇ ವೇಳೆ ಒಆರ್ ಒಪಿ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ 40 ವರ್ಷಗಳಲ್ಲಿ ಒಆರ್ ಒಪಿಗೆ ಸಂಬಂಧಿಸಿದಂತೆ ಏನನ್ನೂ ಮಾಡಲಿಲ್ಲ,. 2014 ರ ಚುನಾವಣೆಗೂ ಮುನ್ನ ಹಣ ಬಿಡುಗಡೆ ಮಾಡಿದ್ದರು,   ಆ ಮೊತ್ತ ಅಧಿಕೃತ ಪಿಂಚಣಿ ಪಡೆಯುವವರ ಅಂಕಿ-ಅಂಶಗಳಿಗೆ ಸರಿ ಹೊಂದುವುದಿಲ್ಲ ಎಂದು ತಿಳಿದಿದ್ದರೂ ಕಾಟಾಚಾರಕ್ಕೆ ಹಣ ಬಿಡುಗಡೆ ಮಾಡಿದ್ದರು, ಆದರೆ ಒಆರ್ ಒಪಿಗೆ ಬದ್ಧತೆ ತೋರಿ ಅದನ್ನು ನಿಜ ಮಾಡಿದ್ದು ನಾವು ಎಂದು ಮೋದಿ ಹೇಳಿದ್ದಾರೆ. 
ಕೇವಲ ಚಪ್ಪಾಳೆಗಳಿಗಾಗಿ ಕೆಲವರು ಈಡೇರಿಸಲಾಗದ ಭರವಸೆಗಳನ್ನು ನೀಡಿದ್ದರು, ಈ ಮೂಲಕ ಜನರನ್ನು ದಾರಿ ತಪ್ಪಿಸುವ ಸಂಸ್ಕೃತಿಯನ್ನೇ ಸೃಷ್ಟಿಸಿದ್ದರು. ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೆ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಬರ ನಿರ್ವಹಣೆ ಮಾಡಿರುವ ರೀತಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT