ನವದೆಹಲಿ: ಹಜ್ ಯಾತ್ರಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ನಿಲ್ಲಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪ್ರತಿವರ್ಷ ಹಜ್ ಯಾತ್ರೆ ಸಬ್ಸಿಡಿಗೆ ಸುಮಾರು 750 ಕೋಟಿ ರುಪಾಯಿ ವೆಚ್ಚ ಮಾಡುತ್ತಿತ್ತು. ಈ ಸಬ್ಸಿಡಿಯ ಉಪಯೋಗ ಮುಸ್ಲಿಂರಿಗೆ ಆಗುತ್ತಿರಲಿಲ್ಲ. ಬದಲಾಗಿ ಏಜೆನ್ಸಿಗಳಿಗೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ನಿಲ್ಲಿಸಲಾಗಿದೆ ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಭಾರತದಿಂದ ಸುಮಾರು 1 ಲಕ್ಷ 75 ಸಾವಿರ ಜನರು ಹಜ್ ಯಾತ್ರೆ ಕೈಗೊಳ್ಳುತ್ತಿದ್ದು ಇವರೆಲ್ಲರೂ ಸಬ್ಸಿಡಿ ಇಲ್ಲದೆ ಹಜ್ ಗೆ ತೆರಳಲಿದ್ದಾರೆ.