ಬಿಪಿನ್ ರಾವತ್ 
ದೇಶ

ಗಂಭೀರ ಸಮಸ್ಯೆ ಇಲ್ಲ, ಆದರೆ ಸೇನಾ ಪಡೆ ಸನ್ನದ್ಧವಾಗಿದೆ: ಡೋಕ್ಲಾಮ್ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಡೋಕ್ಲಾಮ್ ಬಗ್ಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಡೊಕ್ಲಾಮ್ ವಿವಾದದ ನಂತರದಲ್ಲಿ ಯಾವುದೇ ಗಂಭೀರ ಸಮಸ್ಯೆ ಉದ್ಭವಿಸಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ: ಡೋಕ್ಲಾಮ್ ಬಗ್ಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಡೊಕ್ಲಾಮ್ ವಿವಾದದ ನಂತರದಲ್ಲಿ ಯಾವುದೇ ಗಂಭೀರ ಸಮಸ್ಯೆ ಉದ್ಭವಿಸಿಲ್ಲ ಎಂದು ಹೇಳಿದ್ದಾರೆ. 
ಚೀನಾ-ಭಾರತ ನಿರಂತರ ಮಾತುಕತೆ ನಡೆಸಿದ್ದು, ವಿವಾದ ಉಂಟಾಗುವುದಕ್ಕೂ ಮುನ್ನ ಇದ್ದ ಶಾಂತಿಯುತ ವಾತಾವರಣ ಈಗ ಪುನಃ ನಿರ್ಮಾಣವಾಗಿದೆ. ಆದರೆ ಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ. 
ಇನ್ನು ಇದೇ ವೇಳೆ ಉತ್ತರ ಡೊಕ್ಲಾಮ್ ನಲ್ಲಿ ವಿವಾದ ಉಂಟಾದಾಗ ಇದ್ದ ಚೀನಾ ಸೈನಿಕರ ಸಂಖ್ಯೆಗಿಂತ ಈಗಿರುವ ಸಂಖ್ಯೆ ಕಡಿಮೆ ಆಗಿದೆ ಎಂದು ರಾವತ್ ಹೇಳಿದ್ದು, ಚೀನಾದವರು ತಾತ್ಕಾಲಿಕವಾದಂತಹ ಮೂಲಸೌಕರ್ಯ ಅಭಿವೃದ್ಧಿ ಮಾಡಿಕೊಂಡಿದ್ದು ಮತ್ತೊಮ್ಮೆ ಬರಬಹುದು ಎಂದು ಊಹೆ ಮಾಡಬಹುದು, ಅಥವಾ ಚಳಿಗಾಲದಲ್ಲಿ ಅವರ ಉಪಕರಣಗಳನ್ನು ತೆಗೆದುಕೊಂಡು ಹೋಗಲಾರದೇ ಆ ವ್ಯವಸ್ಥೆ ಮಾಡಿರಬೇಕು ಎಂದು ರಾವತ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?