ನವದೆಹಲಿ: ಒಂಟಿ ತೋಳ ದಾಳಿಗಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಕಾಶ್ಮೀರಿಗಳಲ್ಲಿ ತೀವ್ರವಾದವನ್ನು ಉತ್ತೇಜಿಸುತ್ತಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಗೃಹ ಸಚಿವಾಲಯದ ಸೈಬರ್ ವಿಭಾಗ ಈ ಮಾಹಿತಿ ಹೊರಹಾಕಿದ್ದು, ತೀವ್ರವಾದವನ್ನು ಉತ್ತೇಜಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಫೋಟೊಗಳು, ಲೇಖನಗಳು ಗೃಹ ಸಚಿವಾಲಯದ ಗಮನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ತೀವ್ರವಾದವನ್ನು ಉತ್ತೇಜಿಸುತ್ತಿರುವ ಟೆಲಿಗ್ರಾಮ್ ಜಾಲವನ್ನು ಸೈಬರ್ ವಿಭಾಗ ಪತ್ತೆ ಹಚ್ಚಿತ್ತು.
ಟೆಲಿಗ್ರಾಮ್ ಜಾಲ 2017 ರ ಸೆ.23 ರಂದು ಸಕ್ರಿಯಗೊಳಿಸಲಾಗಿದ್ದು, ಅಕ್ಟೋಬರ್ 3 ರಂದು ಮರುನಾಮಕರಣ ಮಾಡಲಾಗಿದೆ. ಈ ಚಾನಲ್ ನಲ್ಲಿ 223 ಸದಸ್ಯರು ಅನುಯಾಯಿಗಳಿದ್ದಾರೆ, ಅಷ್ಟೇ ಅಲ್ಲದೇ ಚಾನೆಲ್ ನಲ್ಲಿ ಒಂಟಿ ತೋಳ ದಾಳಿ ನಡೆಸುವ ಬಗ್ಗೆ ಬರಹಗಳನ್ನು ಅಪ್ ಲೋಡ್ ಮಾಡಲಾಗಿತ್ತು ಎಂದು ಗೃಹ ಇಲಾಖೆ ಮೂಲಗಳು ತಿಳಿಸಿದೆ.