ದೇಶ

ಅಂತಾರಾಷ್ಟ್ರೀಯ ಗಡಿದಾಟಿ ಉಗ್ರರನ್ನು ಸಂಹರಿಸುವ ಹಕ್ಕು ಭಾರತಕ್ಕಿದೆ: ನೇತನ್ಯಾಹು

Vishwanath S
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ವಿಶ್ವಸಂಸ್ಥೆ ಭಯೋತ್ಪಾದಕರೆಂದು ಘೋಷಿಸಿದ ಉಗ್ರರನ್ನು ಅಂತಾರಾಷ್ಟ್ರೀಯ ಗಡಿದಾಟಿ ಏಕಪಕ್ಷೀಯ ದಾಳಿ ನಡೆಸುವ ಅಧಿಕಾರ ಭಾರತಕ್ಕಿದೆ ಎಂದು ಹೇಳಿದ್ದಾರೆ. 
ಟೈಮ್ಸ್ ನೌಗೆ ನೀಡಿದ ಸಂದರ್ಶನಲ್ಲಿ ಅಂತಾರಾಷ್ಟ್ರೀಯ ಗಡಿದಾಟಿ ಭಯೋತ್ಪಾದಕರನ್ನು ಸದೆಬಡಿಯಲು ಭಾರತ ಮುಂದಾದರೆ ಇಸ್ರೇಲ್ ಬೆಂಬಲಿಸುತ್ತಾ ಎಂದು ಕೇಳಿ ಪ್ರಶ್ನೆಗೆ ಉತ್ತರಿಸಿದ ನೇತನ್ಯಾಹು. ನಾವು ಪರಸ್ಪರ ತಿಳುವಳಿಕೆ ಹೊಂದಿದ್ದೇವೆ. ಇದಕ್ಕಿಂತ ಹೆಚ್ಚೇನೂ ನಾನು ಹೇಳಬೇಕಿಲ್ಲ ಅಂದುಕೊಳ್ಳುತ್ತೇನೆ. ಭಾರತ ಇಸ್ರೇಲ್ ಪಾಲುದಾರಿಕೆಗಳು ಯಾವುದೇ ಒಂದು ನಿರ್ದಿಷ್ಟ ದೇಶದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು. 
ಬೆಂಜಮಿನ್ ನೇತನ್ಯಾಹು ಅವರು ನಾವು ಪಾಕಿಸ್ತಾನದ ಶತ್ರುಗಳಲ್ಲ. ಪಾಕಿಸ್ತಾನವೂ ನಮ್ಮ ಶತ್ರುವಾಗಿರಬಾರದು ಎಂದು ಹೇಳಿದರು. ಇನ್ನು ಪ್ಯಾಲೇಸ್ತೀನ್ ವಿಚಾರವಾಗಿ, ಇಸ್ರೇಲ್ ಒಂದು ಪರಿಪೂರ್ಣ ರಾಷ್ಟ್ರವೆಂದು ಹೇಳಿಕೊಳ್ಳಲು ಆಗುವುದಿಲ್ಲ. ಸಮಸ್ಯೆಗಳಿಲ್ಲದ ಯಾವುದೇ ದೇಶವೂ ಜಗತ್ತಿನಲ್ಲಿಲ್ಲ. ಆದರೆ ನಮ್ಮ ನೆರೆಯ ದೇಶಗಳ ಜತೆ ಸ್ನೇಹ ಹಸ್ತವನ್ನು ಚಾಚಿದ್ದೇವೆ ಎಂದು. 
SCROLL FOR NEXT