ದೇಶ

ಅತ್ಯಾಚಾರ ಪ್ರಕರಣ ;ಫಿಫ್ಲಿಲೈವ್ ಸಹ ನಿರ್ದೇಶಕ ಮಹಮ್ಮದ್ ಫಾರೂಕಿ ನಿರ್ದೋಷಿ; ಸುಪ್ರೀಂಕೋರ್ಟ್

Nagaraja AB

 ದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಫಿಫ್ಲಿ ಲೈವ್  ಚಿತ್ರದ ಸಹ ನಿರ್ದೇಶಕ ಮಹಮ್ಮದ್ ಪಾರೂಕಿ  ನಿರ್ದೋಷಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಅವರ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದೆ.
ಅಮೆರಿಕಾದ ಸಂಶೋಧನಾ ವಿದ್ಯಾರ್ಥಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ,  ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪು ಉತ್ತಮವಾಗಿದ್ದು, ತಾನೂ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್. ಎ. ಬೋಧೆ ಹಾಗೂ ಎಲ್ ನಾಗೇಶ್ವರ ರಾವ್ ಅವರಿದ್ಧ ದ್ವಿಸದಸ್ಯ ಪೀಠ ಹೇಳಿದೆ.
ಈ ಪ್ರಕರಣ ಕುರಿತು 2016 ರಲ್ಲಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಮೊಹಮ್ಮದ್ ಫಾರೂಕಿ ಆರೋಪಿ ಎಂದು ಘೋಷಿಸಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು, ಆದಾಗ್ಯೂ ಹೈಕೋರ್ಟ್ ನಿರ್ದೋಷಿ ಎಂದು ಹೈಕೋರ್ಟ್ ಕಳೆದ ವರ್ಷ ತೀರ್ಪು ನೀಡಿತ್ತು.

ಮಾರ್ಚ್  29,2015ರಲ್ಲಿ ದಕ್ಷಿಣ ದೆಹಲಿಯಲ್ಲಿ  ತನ್ನ ಮೇಲೆ  ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ  ಫಾರೂಕಿ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿ ಬಂಧಿಸಿದ್ದರು.


SCROLL FOR NEXT