ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು
ಜಮ್ಮು: ಜಮ್ಮು-ಕಾಶ್ಮೀರದ ಆರ್.ಎಸ್.ಪುರ ವಲಯದಲ್ಲಿ ಮತ್ತೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬ ಯುವತಿ ಸಾವಿಗೀಡಾಗಿದ್ದಾಳೆ.
ನಿನ್ನೆ ಆರ್.ಎಸ್.ಪುರದ ವಲಯದಲ್ಲಿ ಪಾಕಿಸ್ತಾನ ದಾಳಿಗೆ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದು, 17 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಮೂವರು ನಾಗರಿಕರು ಗಾಯಗೊಂಡಿದ್ದಾರೆ.
ಗಡಿ ಭದ್ರತಾ ಪಡೆ ಪಾಕಿಸ್ತಾನ ಸೇನೆಯ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಗುಂಡಿನ ಚಕಮಕಿ ಇನ್ನೂ ಕೂಡ ಅಲ್ಲಿ ಮುಂದುವರಿದಿದೆ.
ಇನ್ನೊಂದೆಡೆ ಕತುವಾ ನಗರದ ಹಿರಾನಗರ ವಲಯದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಐವರು ನಾಗರಿಕರು ಗಾಯಗೊಂಡಿದ್ದು, ಇದುವರೆಗೆ ಗಾಯಗೊಂಡವರ ಸಂಖ್ಯೆ 11ಕ್ಕೇರಿದೆ.
ಜಮ್ಮುವಿನ ಪೂಂಚ್ ವಲಯದ ಗಡಿ ಭಾಗದಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಸೇನೆ ಎರಡು ದಿನಗಳ ಹಿಂದೆ ನಾಲ್ವರು ಪಾಕಿಸ್ತಾನ ಸೈನಿಕರನ್ನು ಕೊಂದು ಹಾಕಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos