ದೇಶ

ಮಧ್ಯಪ್ರದೇಶ ನೂತನ ರಾಜ್ಯಪಾಲರಾಗಿ ನಾಳೆ ಆನಂದಿಬೆನ್ ಪಟೇಲ್ ಪ್ರಮಾಣ

Lingaraj Badiger
ಭೋಪಾಲ್ : ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಮಂಗಳವಾರ ಮಧ್ಯಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಾಳೆ ಬೆಳಗ್ಗೆ ರಾಜಭನದಲ್ಲಿ ನಡೆಯುವ ಸಮಾರಂಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಆನಂದಿಬೆನ್ ಪಟೇಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ ಎಂದು ರಾಜಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಗುಜರಾತ್ ರಾಜ್ಯಪಾಲ ಓಂ ಪ್ರಕಾಶ್ ಕೊಹ್ಲಿ ಅವರು ಮಧ್ಯಪ್ರದೇಶ ಹೆಚ್ಚುವರಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಆನಂದಿಬೆನ್ ಅವರನ್ನು ಮಧ್ಯಪ್ರದೇಶದ ನೂತನ  ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ ಎಂದು ಕಳೆದ ಶನಿವಾರ ರಾಷ್ಟ್ರಪತಿ ಭವನ ಟ್ವೀಟ್‌ ಮಾಡಿತ್ತು.
2014ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ 76 ವರ್ಷದ ಆನಂದಿಬೆನ್ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಆನಂದಿಬೆನ್ ಪಟೇಲ್ ಅವರು ಆಗಸ್ಟ್ 2016ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
SCROLL FOR NEXT