ದೇಶ

ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಮರುಜೀವ ನೀಡಲು ಖುರೇಷಿ ಭಾರತಕ್ಕೆ ಆಗಮಿಸಿದ್ದ: ದೆಹಲಿ ಪೊಲೀಸ್

Srinivasamurthy VN
ನವದೆಹಲಿ: ದಶಕಗಳ ಹಿಂದೆಯೇ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಮರುಜೀವ ನೀಡಲೆಂದೇ 'ಭಾರತದ ಬಿನ್ ಲಾಡೆನ್ ಕುಖ್ಯಾತಿಯ ಉಗ್ರ ಅಬ್ದುಲ್ ಸುಭಾನ್ ಖುರೇಷಿ  ಭಾರತಕ್ಕೆ ವಾಪಸ್ ಆಗಮಿಸಿದ್ದ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
2008ರ ಗುಜರಾತ್ ಸರಣಿ ಸ್ಫೋಟ ಪ್ರಕರಣ ಸಂಬಂಧ ಇಂದು ದೆಹಲಿ ಪೊಲೀಸರು 'ಭಾರತದ ಬಿನ್ ಲಾಡೆನ್ ಕುಖ್ಯಾತಿಯ ಉಗ್ರ ಅಬ್ದುಲ್ ಸುಭಾನ್ ಖುರೇಷಿಯನ್ನು ಬಂಧಿಸಿದ್ದು, ಈ ವೇಳೆ ಆತನನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು  ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆತ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದು, ಖುರೇಶಿ ತನ್ನ ಹೆಸರು, ವಿಳಾಸ ಬದಲಿಸಿಕೊಂಡು ನಕಲಿ ದಾಖಲೆಗಳ ಸಹಾಯದಿಂದ ನೇಪಾಳದಲ್ಲಿ ವಾಸಿಸುತ್ತಿದ್ದನಂತೆ. ಇತ್ತೀಚೆಗಷ್ಟೇ ಖುರೇಷಿ  ಭಾರತಕ್ಕೆ ಆಗಮಿಸಿದ್ದು, ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಮರುಜೀವ ನೀಡಲೆಂದೇ ಖುರೇಷಿ ಭಾರತಕ್ಕೆ ವಾಪಸ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದೆಹಲಿಯ ಸ್ಪೆಷಲ್ ಸೆಲ್ ನ ಡಿಸಿಪಿ ಪ್ರಮೋದ್ ಕುಶ್ವಾಹ್ ಅವರು, ಖುರೇಷಿ ವರ್ಷಗಳ ಕಾಲ ನಕಲಿ ದಾಖಲೆಗಳ ನೆರವಿನೊಂದಿಗೆ ನೇಪಾಳದಲ್ಲಿ ಜೀವಿಸುತ್ತಿದ್ದ. ಇದೀಗ ಕೆಲ  ಉಗ್ರರ ಸಂಪರ್ಕ ಸಾಧಿಸಿ, ತನ್ನ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಮರು ಜೀವ ನೀಡಲು ಮುಂದಾಗಿದ್ದ. ಭವಿಷ್ಯದಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಸಾಕಷ್ಚು ವಿಧ್ವಂಸಕ ಕೃತ್ಯಗಳಿಗೆ ಯೋಜನೆ ರೂಪಿಸಿದ್ದ ಎಂದು  ಮಾಹಿತಿ ನೀಡಿದ್ದಾರೆ.
SCROLL FOR NEXT