ನವದೆಹಲಿ: ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ದೇಶದ ಜನತೆ ಪಾಲಿನ ಪ್ರೀತಿಯ ನೇತಾಜಿ ಸುಭಾಷ್ ಚಂದ್ರ ಬೋಸ್ 121ನೇ ಜನ್ಮದಿನವಾದ ಇಂದು ದೇಶವು ಅವರನ್ನು ಗೌರವದಿಂದ ಸ್ಮರಿಸುತ್ತಿದೆ. ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ನೇತಾಜಿ ಜನ್ಮ ದಿನ ಪ್ರಯುಕ್ತ ಗೌರವ ನಮನ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡ, ಡಾ.ಮನಮೋಹನ್ ಸಿಂಗ್, ಯುಪಿಎ ನಾಯಕಿ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರು ಸುಬಾಷ್ ಚಂದ್ರ ಬೋಸ್ ಅವರನ್ನು ಸ್ಮರಿಸಿದ್ದಾರೆ.
ದಾವೋಸ್‍ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಬಾಗವಹಿಸಿರುವ ಪ್ರಧಾನಿ ಮೋದಿ ವೀಡಿಯೋವೊಂದನ್ನು ಅಪ್ ಮಾಡಿದ್ದು ನೇತಾಜಿ ಬೋಸ್ ಆವರ ಸಾಹಸವನ್ನು ಹೊಗಳಿದ್ದಾರೆ. ಸುಭಾಷ್ ಜನ್ಮ ದಿನವಾದ ಇಂದು ನಾನು ದೇಶದ ಸ್ವಾತಂತ್ರಕ್ಕಾಗಝೋರಾಡಿದ ಅಗ್ರ ನಾಯಕರ ಸೇವೆಯನ್ನು ಸ್ಮರಿಸಿ ಗೌರವಿಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
ಜನವರಿ 23,1987ರಲ್ಲಿ ಒಡಿಸ್ಸಾದ ಕಟಕ್‍ನಲ್ಲಿ ಜನಿಸಿದ್ದ ಸುಭಾಷ್ ಚಂದ್ರ ಬೋಸ್ 1942ರಲ್ಲಿ ಅವರು ಬ್ರಿಟಿಷರನ್ನು ದೇಶದಿಂದ ಬಡಿದಟ್ಟಲು ಜಪಾನ್ ನೆರವಿನೊಂದಿಗೆ ಭಾರತೀಯ ರಾಷ್ಟ್ರೀಯ ಸೇನೆ (ಐಎನ್ ಎ) ಸ್ಥಾಪಿಸಿ ಅಂಡಮಾನ್ ನಿಕೋಬಾರ್ ಮೇಲೆ ಸ್ವತಂತ್ರ ಭಾರತ ರಾಷ್ಟ್ರಧ್ವಜ ಹಾರಿಸಿದ್ದರು. ಆದರೆ ಇಂತಹಾ ಮಹಾನಾಯಕ ಸಾವು ಂಆತ್ರ ಇಂದಿಗೂ ನಿಗೂಢಆಗಿದ್ದು ವಿಮಾನ ಅಪಘಾತದಲ್ಲಿ ನೇತಾಜಿ ಮಡಿದರೆಂದು ಹೇಳಲಾಗಿದ್ದರೂ ಈ ವಿಚಾರ ಇನ್ನೂ ಗೊಂದಲಮಯವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos