ವಿಶ್ವಯುದ್ಧ- II ರಲ್ಲಿ ಹೋರಾಡಿದ್ದ ಭಾರತ ಸೇನೆಯ ಅತಿ ಹಿರಿಯ ಮೇಜರ್ ಎಫ್ ಕೆ ಕೆ ಸಿರ್ಕಾರ್ ನಿಧನ!
ಅಲ್ಲಹಾಬಾದ್: ವಿಶ್ವಯುದ್ಧ- II ರಲ್ಲಿ ಹೋರಾಡಿದ್ದ ಭಾರತ ಸೇನೆಯ ಅತಿ ಹಿರಿಯ ಮೇಜರ್ ಎಫ್ ಕೆಕೆ ಸಿರ್ಕಾರ್(101) ಜ.21 ರಂದು ನಿಧನರಾಗಿದ್ದಾರೆ.
ಅಸ್ಸಾಂ ರೆಜಿಮೆಂಟ್ ನ 2 ನೇ ಬೆಟಾಲಿಯನ್ ನ್ನು ಪ್ರತಿನಿಧಿಸುತ್ತಿದ್ದ ಎಫ್ ಕೆಕೆ ಸಿರ್ಕಾರ್ ವಿಶ್ವಯುದ್ಧ- II, 1947-48ರ ಭಾರತ- ಪಾಕಿಸ್ತಾನ ಯುದ್ಧ ಹಾಗೂ 1962 ರ ಭಾರತ ಚೀನಾ ಯುದ್ಧದಲ್ಲಿ ಹೋರಾಡಿದ್ದ ಮೇಜರ್ ಎಂಬ ಹೆಗ್ಗಳಿಕೆ ಹೊಂದಿದ್ದರು
ಇನ್ನು ಎನ್ ಸಿಸಿ ಯನ್ನು ಮೊದಲು ಅಭಿವೃದ್ಧಿಪಡಿಸಿದ್ದ ಅಧಿಕಾರಿಗಳ ಸಾಲಿನಲ್ಲಿ ಎಫ್ ಕೆಕೆ ಸಿರ್ಕಾರ್ ಸಹ ಇದ್ದು, ತಮ್ಮ 95 ನೇ ವಯಸ್ಸಿನಲ್ಲಿಯೂ ಅವರು ದಿ ಮೆಮೋರಿಸ್ ಆಫ್ ಎ ಸೋಡ್ಜರ್ ಎಂಬ ಪುಸ್ತಕವನ್ನು ಬರೆದಿದ್ದರು. ಇಹ ಲೋಕ ತ್ಯಜಿಸಿದ ಮೇಜರ್ ಎಫ್ ಕೆಕೆ ಸಿರ್ಕಾರ್ ಅವರ ಅಂತ್ಯಸಂಸ್ಕಾರವನ್ನು ಅಲ್ಲಹಾಬಾದ್ ನ ರಾಜಪುರ್ ನಲ್ಲಿ ನೆರವೇರಿಸಲಾಗಿದೆ.