ಮುಂಬೈ: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆಯ ಕುರಿತು ವರದಿ ಮಾಡುವ ಅಥವಾ ಪ್ರಕಟಿಸುವ ಪತ್ರಕರ್ತರನ್ನು ನಿಷೇಧಿಸುವ ಸಂಬಂಧ ವಿಚಾರಣಾ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದು ಪಡಿಸಿದೆ.
ನ್ಯಾಯಮೂರ್ತಿ ರೇವತಿ ಮೋಹಿತೆ ಅವರ ಏಕ ಸದಸ್ಯ ಪೀಠ ಈ ಆದೇಶ ರದ್ದುಪಡಿಸಿದ್ದು "ಸಿಬಿಐ ವಿಶೇಷ ನ್ಯಾಯಾಲಯ ಈ ಮಾದ್ಯಮ ವರದಿ ನಿಷೇಧ ಸಂಬಂಧ ಆದೇಶ ನೀಡುವಾಗ ತನ್ನ ಅಧಿಕಾರವನ್ನು ಅತಿಕ್ರಮಿಸಿದೆ ನ್ಯಾಯಾಲಯದ ವರದಿಗಾರರ ಸಮೂಹ ಮತ್ತು ನಗರದ ಪತ್ರಕರ್ತರನ್ನು ನಿಷೇಧಿಸುವ ಅಧಿಕಾರ ಕೇವಲ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳಿಗಿದೆ. ಅವುಗಳು ಸಹ ಕೆಲ ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಸಮಯದ ಮಟ್ಟಿಗೆ ಇಂತಹಾ ನಿಷೇಧ ಹೇರುತ್ತವೆ" ಎಂದು ಅವರು ಅಭಿಪ್ರಾಯ ಪಟ್ಟರು.
ಕಳೆದ ವರ್ಷ ನವೆಂಬರ್ 29ರಂದು ಸಿಬಿಐ ವಿಶೇಷ ನ್ಯಾಯಾಲಯ ಸೊಹ್ರಾಬುದ್ದೀನ್ ಪ್ರಕರಣ ಸಂಬಂಧ ವಿಚಾರಣೆ ನಡೆಯುವ ಸಮಯದಲ್ಲಿ ವಿಚಾರಣೆಯ ವಿವರಗಳನ್ನು ವರದಿ ಮಾಡುವ ಅಥವಾ ಪ್ರಕಟಿಸುವ ಪತ್ರಕರ್ತರನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಪತ್ರಕರ್ತರು ವಿಚಾರಣೆಯಲ್ಲಿ ಹಾಜರಾಗಲು ಬಯಸಿದಲ್ಲಿ ಹಾಗೆ ಭಾಗವಹಿಸಿದ್ದರೂ ವಿಚಾರಣಾ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics