ಎಲ್.ಕೆ.ಅಡ್ವಾಣಿ 
ದೇಶ

ಲಾಲ್ ಬಹದ್ದೂರ್ ಶಾಸ್ತ್ರಿ ಅವರೆಂದೂ ಆರ್ ಎಸ್ ಎಸ್ ವಿರೋಧಿಯಾಗಿರಲಿಲ್ಲ: ಎಲ್.ಕೆ. ಅಡ್ವಾಣಿ

ಭಾರತದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಎಂದೂ ಆರ್ ಎಸ್ ಎಸ್ ಬಗೆಗೆ ಅಸಹನೆ ತಾಳಿರಲಿಲ್ಲ.

ನವದೆಹಲಿ: ಭಾರತದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಎಂದೂ ಆರ್ ಎಸ್ ಎಸ್ ಬಗೆಗೆ ಅಸಹನೆ ತಾಳಿರಲಿಲ್ಲ. ಅವರು ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಆರ್ ಎಸ್ ಎಸ್ ಮುಖಂಡ ಗುರು ಗೋಳ್ವಲ್ಕರ್ ಅವರನ್ನು ತಮ್ಮ ಆಡಳಿತದ ಸಲುವಾಗಿ ಸಲಹೆ ನೀಡುವಂತೆ ಆಹ್ವಾನಿಸಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಹೇಳಿದ್ದಾರೆ.
ಆರ್ ಎಸ್ ಎಸ್ ಹೊರತರುತ್ತಿರುವ ಆರ್ಗನೈಸರ್ ವಾರಪತ್ರಿಕೆಯ ಎಪ್ಪತ್ತನೇ ವಾರ್ಷಿಕ ಆವೃತ್ತಿಯ ಲೇಖನದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವ್ಯಕ್ತಿತ್ವದ ಬಗೆಗೆ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ. "ನೆಹರು ಅವರಂತೆ, ಶಾಸ್ತ್ರಿ ಜನಸಂಘ ಮತ್ತು ಆರ್ ಎಸ್ ಎಸ್ ಜತೆಗೆ ಯಾವುದೇ ಸೈದ್ಧಾಂತಿಕ ಮನಸ್ತಾಪವನ್ನು ಹೊಂದಿರಲಿಲ್ಲ. ಅವರು ರಾಷ್ಟ್ರೀಯ ಸಮಸ್ಯೆಗಳ ಕುರಿತು ಸಮಾಲೋಚನೆಗಾಗಿ ಶ್ರೀ ಗುರುಜಿ ಅವರನ್ನು ಖುದ್ದು ಆಹ್ವಾನಿಸುತ್ತಿದ್ದರು, 
"ಶಾಸ್ತ್ರಿ ಅವರು ವಾರಕ್ಕೊಮ್ಮೆ ಗುರೂಜಿಯವರನ್ನು ಭೇಟಿಯಾಗುತ್ತಿದ್ದರು, ಪ್ರತಿ ಬಾರಿಯೂ ಪರಿಣಾಮಾತ್ಮಕ ಚರ್ಚೆ ನಡೆಯುತ್ತಿತ್ತು." ಅಡ್ವಾಣಿ ಹೇಳಿಕೊಂಡಿದ್ದಾರೆ.
ಅಡ್ವಾಣಿ ಅವರು 1960 ರಲ್ಲಿ ಸಹಾಯಕ ಸಂಪಾದಕರಾಗಿ ಆರ್ಗನೈಸರ್ ಪತ್ರಿಕೆ ಸೇರಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT