ದೇಶ

ಸಿಬಿಎಫ್ ಸಿ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ: ಅರುಣ್ ಜೇಟ್ಲಿ

Sumana Upadhyaya
ನವದೆಹಲಿ: ತೆರಿಗೆ ಪಾವತಿ ತಪ್ಪಿಸುವಿಕೆಯನ್ನು ಪತ್ತೆಹಚ್ಚಲು ಮತ್ತು ವ್ಯಾಪಾರದ ಅನುಕೂಲಕ್ಕಾಗಿ ಕೇಂದ್ರ ತೆರಿಗೆ ಮತ್ತು ಸುಂಕ(ಸಿಬಿಎಫ್ ಸಿ)ಮಂಡಳಿ ಅವಳಿ ಸವಾಲುಗಳನ್ನು ಈಡೇರಿಸಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ತೆರಿಗೆ ಇಲಾಖೆ ಎರಡು ಪ್ರಮುಖ ಪಾತ್ರಗಳನ್ನು ನಿರ್ವಹಿಸಬೇಕಾಗಿದೆ. ತೆರಿಗೆ ಪಾವತಿ ತಪ್ಪಿಸುವುದನ್ನು ಪತ್ತೆಹಚ್ಚುವುದು ಮತ್ತು ಹೊರರಾಜ್ಯಗಳು ಮತ್ತು ಹೊರದೇಶಗಳಿಂದ ನಮ್ಮ ದೇಶಕ್ಕೆ ಸುಲಭವಾಗಿ ಬಂದು ವ್ಯಾಪಾರ ಆರಂಭಿಸಲು ಅನುಕೂಲ ಮಾಡಿಕೊಡಬೇಕು ಎಂದು ಜೈಟ್ಲಿ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಹೂಡಿಕೆ ಸಮಾರಂಭ ಮತ್ತು ಅಂತರರಾಷ್ಟ್ರೀಯ ತೆರಿಗೆ ದಿನ-2018ರಲ್ಲಿ ಮಾತನಾಡಿದರು.
ದೇಶೀಯ ಮತ್ತು ಅಂತರರಾಷ್ಟ್ರೀಯ ತೆರಿಗೆ ವ್ಯವಹಾರಗಳಲ್ಲಿ ತರ್ಕಬದ್ಧತೆಯಿದ್ದು ಹಲವು ವಸ್ತುಗಳು ಭಾರತದಲ್ಲಿಯೇ ಸಿಗುವಂತಹ ವಾತಾವರಣ ಮೂಡಬೇಕು. ಅದು ಮೇಕ್ ಇನ್ ಇಂಡಿಯಾ ಅಭಿಯಾನ ಮೂಲಕ ಸಾಧ್ಯ ಎಂದು ಜೇಟ್ಲಿ ಸಾರಿದರು.
ತೆರಿಗೆ ಇಲಾಖೆಯ ಕಾರ್ಯಶೈಲಿ ಮತ್ತು ಪಾತ್ರ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ತೆರಿಗೆ ಪಾವತಿ ತಪ್ಪಿಸಿಕೊಳ್ಳುವುದನ್ನು ಪತ್ತೆಹಚ್ಚುವುದು, ವ್ಯಾಪಾರಕ್ಕೆ ಹೊರಗಿನವರಿಗೆ ಸೌಕರ್ಯ ಮಾಡಿಕೊಡುವುದು ಇತ್ತೀಚಿನ ಅಗತ್ಯವಾಗಿದೆ. ವ್ಯಾಪಾರಕ್ಕೆ ಹೆಚ್ಚು ಸುಗಮ ಮಾಡಿಕೊಟ್ಟಷ್ಟೂ ವೆಚ್ಚ ಕಡಿತಕ್ಕೆ ಹೆಚ್ಚು ಅವಕಾಶಗಳಿರುತ್ತವೆ ಎಂದರು.
ವ್ಯಾಪಾರ ಮತ್ತು ತೆರಿಗೆ ಮತ್ತು ಅಬಕಾರಿ ಇಲಾಖೆ ಮಧ್ಯೆ ಪರಿಣಾಮಕಾರಿ ಸಂವಹನಕ್ಕೆ ಎರಡು ಪ್ರಮುಖ ಸಾಧನಗಳಾದ ಐಸಿಇಟಿಎಬಿ ಮತ್ತು ಐಸಿಇಟಿಆರ್ಎಕೆ ನ್ನು ಉದ್ಘಾಟಿಸಿದರು.
SCROLL FOR NEXT