ಜಮಿತಾ 
ದೇಶ

ಕೇರಳ: ದೇಶದಲ್ಲಿ ಮೊದಲ ಬಾರಿಗೆ ನಮಾಜ್ ನೇತೃತ್ವ ವಹಿಸಿದ ಮಹಿಳೆ

ಕೇರಳದಲ್ಲಿ ಜಮಿತಾ(34) ಎನ್ನುವ ಮಹಿಳೆಯೊಬ್ಬರು ಶುಕ್ರವಾರದ ನಮಾಜ್‌ (ಜುಮಾ) ನೇತೃತ್ವ ವಹಿಸಿಕೊಳ್ಳುವ ಮೂಲಕ ಇಂತಹಾ ಸಾಧನೆ ಮಾಡಿದ ದೇಶದ ಪ್ರಥಮ ಮಹಿಳೆ ಎನಿಸಿದ್ದಾರೆ.

ಮಲಪ್ಪುರಂ(ಕೇರಳ): ಕೇರಳದಲ್ಲಿ ಜಮಿತಾ(34) ಎನ್ನುವ ಮಹಿಳೆಯೊಬ್ಬರು ಶುಕ್ರವಾರದ ನಮಾಜ್‌ (ಜುಮಾ) ನೇತೃತ್ವ ವಹಿಸಿಕೊಳ್ಳುವ ಮೂಲಕ ಇಂತಹಾ ಸಾಧನೆ ಮಾಡಿದ ದೇಶದ ಪ್ರಥಮ ಮಹಿಳೆ ಎನಿಸಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಮಾಮ್‌ ಆಗಿರುವ ಜಮಿತಾ ಪ್ರತಿ ಬಾರಿ ಪುರುಷ ಧರ್ಮ ಗುರುಗಳೇ ನಡೆಸಿಕೊಡುವ ಜುಮಾವನ್ನು ನಡೆಸಿಕೊಟ್ಟಿದ್ದಾರೆ. ಕುರಾನ್‌ ಸುನ್ನತ್‌ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆಗಿರುವ ಜಮಿತಾ  ವೃತ್ತಿಯಲ್ಲಿ ಅಧ್ಯಾಪಕಿಯಾಗಿದ್ದಾರೆ.
ಮೊನ್ನೆ ಶುಕ್ರವಾರ (ಜ.26) ಸುಮಾರು 80 ಮಂದಿ ಭಾಗವಹಿಸಿದ್ದ ಪ್ರಾರ್ಥನಾ ಸಭೆಯ ನೇತೃತ್ವವನ್ನು ವಹಿಸಿಕೊಂಡಿದ್ದ ಜಮಿತಾ "ಕುರಾನ್‌ನಲ್ಲಿ ಮಹಿಳೆಯರ ಬಗ್ಗೆ ತಾರತಮ್ಯ ಭಾವನೆ ಇಲ್ಲ. ಇಮಾಮ್‌ ಆಗಿ ಇದು ನನ್ನ  ಕರ್ತವ್ಯ. ಇದೇ ಮೊದಲ ಬಾರಿಗೆ ನಾನು ಪ್ರಾರ್ಥನಾ ಸಭೆ ನೇತೃತ್ವ ವಹಿಸುತ್ತಿದ್ದೇನೆ. ನನ್ನ ಕಛೇರಿಯಲ್ಲಿ ಪ್ರತಿ ಶುಕ್ರವಾರ ಈ ರೀತಿ ಪ್ರಾರ್ಥನೆ ಕಾರ್ಯಕ್ರಮ ನಡೆ೩ಸುತ್ತೇನೆ" ಎಂದರು. ಕುರಾನ್‌ ಸುನ್ನತ್‌ ಸೊಸೈಟಿಯ ಕಾರ್ಯಾಲಯದಲ್ಲಿ ಈ ಪ್ರಾರ್ಥನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಸೀದಿಯಲ್ಲಿ ಪ್ರತಿ ಶುಕ್ರವಾರ ಪ್ರಾರ್ಥನೆ ನಡೆಯಬೇಕೆನ್ನುವ ನಿಯಮ ಇಲ್ಲ ಎನ್ನುವ ಜಮಿತಾ ತಿರುವನಂತಪುರದ ಮೂಲದವರಾಗಿದ್ದು  ಕೆಲ ವರ್ಷಗಳ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಬೆದರಿಕೆಗಳಿಗೆ ಸಹ ಒಳಗಾಗಿದ್ದರು.  ಇದೀಗ ಮಹಿಳೆಯೊಬ್ಬರು ಶುಕ್ರವಾರದ ಪ್ರಾರ್ಥನೆ ನೇತೃತ್ವ ವಹಿಸಿರುವುದು ಕೇರಳ ಸೇರಿ ಇಡೀ ರಾಷ್ಟ್ರದ ಇಸ್ಲಾಂ ಅನುಯಾಯಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ತಾಯಿಯ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಿಚ್ಚಿಟ್ಟ ಬ್ಯಾಲದ ಕೋಚ್! VIDEO

ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್, ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!

1993ರಲ್ಲಿ 3 ಎಕರೆ ಇದ್ದ ಆಸ್ತಿ 2018ಕ್ಕೆ 1,400 ಕೋಟಿ ಹೇಗಾಯ್ತು?: ರೈತರಿಗೂ ಶ್ರೀಮಂತರಾಗುವ ಮಾರ್ಗ ಹೇಳಿಕೊಡಿ; ಕುಮಾರಸ್ವಾಮಿ

SCROLL FOR NEXT