ದೇಶ

ಮಲೇಷಿಯಾದಲ್ಲಿ ಪದ್ಮಾವತ್ ಗೆ ಸೆನ್ಸಾರ್ ಮಂಡಳಿ ನಿಷೇಧ!

Srinivas Rao BV
ಮಲೇಷಿಯಾ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಗೆ ವಿರೋಧ ವ್ಯಕ್ತಪಡಿಸಿ ಭಾರತದ ಅನೇಕ ರಾಜ್ಯಗಳು ನಿಷೇಧ ವಿಧಿಸಲು ನಿರ್ಧರಿಸಿದ್ದವು, ಆದರೆ ಈಗ ಮಲೇಷಿಯಾದಲ್ಲಿ ಸೆನ್ಸಾರ್ ಮಂಡಳಿಯೇ ಪದ್ಮಾವತ್ ಚಿತ್ರವನ್ನು ನಿಷೇಧಿಸಿದೆ. 
ಇಸ್ಲಾಮ್ ನ ಸೂಕ್ಷ್ಮ ವಿಷಯಗಳನ್ನು ಚಿತ್ರದಲ್ಲಿ ತೋರಿಸಲಾಗಿರುವ ಕಾರಣಕ್ಕಾಗಿ ಪದ್ಮಾವತ್ ಚಿತ್ರವನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಸೆನ್ಸಾರ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಝಮಬೆರಿ ಅಬ್ದುಲ್ ಅಜೀಜ್ ತಿಳಿಸಿದ್ದಾರೆ. ದೇಶದಲ್ಲಿರುವ ಮುಸ್ಲಿಮರ ಭಾವನೆಗಳಿಗೆ ನೋವುಂಟಾಗುವ ಸಾಧ್ಯತೆ ಇರುವುದರಿಂದ ಸೆನ್ಸಾರ್ ಮಂಡಳಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿಲ್ಲ ಎಂದು ಅಜೀಜ್ ತಿಳಿಸಿದ್ದಾರೆ. 
ಭಾರತದಲ್ಲಿ ರಜಪೂತ್ ರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂಬ ಆರೋಪ ಪದ್ಮಾವತ್ ಸಿನಿಮಾದ ವಿರುದ್ಧ ಕೇಳಿಬಂದಿತ್ತು, ಈಗ ಮಲೇಷ್ಯಾದಲ್ಲಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಚಿತ್ರವನ್ನು ನಿಷೇಧಿಸಲಾಗಿದೆ. ಆದರೆ ಪಾಕಿಸ್ತಾನದಲ್ಲಿ ಮಾತ್ರ ಪದ್ಮಾವತಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. 
SCROLL FOR NEXT