ಅಮಾನತುಗೊಂಡಿದ್ದ ಶಿಕ್ಷಕಿ ಉತ್ತರ ಬಹುಗುಣ 
ದೇಶ

ಶಿಕ್ಷಣ ಇಲಾಖೆಯಲ್ಲ, ಅಮಾನಿಸಿದ ಸಿಎಂ ಕ್ಷಮೆ ಕೇಳಲಿ; ಅಮಾನತುಗೊಂಡ ಉತ್ತರಾಖಂಡ್ ಶಿಕ್ಷಕಿ

ಶಿಕ್ಷಣ ಇಲಾಖೆಯಲ್ಲ, ನನ್ನನ್ನು ಅವಮಾನ ಮಾಡಿದ್ದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕ್ಷಮೆಯಾಚಿಸಲಿ ಎಂದು ಅಮಾನತುಗೊಂಡಿದ್ದ ಶಿಕ್ಷಕಿ ಉತ್ತರ ಬಹುಗುಣ ಅವರು ಭಾನುವಾರ ಆಗ್ರಹಿಸಿದ್ದಾರೆ...

ಡೆಹ್ರಾಡೂನ್; ಶಿಕ್ಷಣ ಇಲಾಖೆಯಲ್ಲ, ನನ್ನನ್ನು ಅವಮಾನ ಮಾಡಿದ್ದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕ್ಷಮೆಯಾಚಿಸಲಿ ಎಂದು ಅಮಾನತುಗೊಂಡಿದ್ದ ಶಿಕ್ಷಕಿ ಉತ್ತರ ಬಹುಗುಣ ಅವರು ಭಾನುವಾರ ಆಗ್ರಹಿಸಿದ್ದಾರೆ. 
ಡೆಹ್ರಾಡೂನ್ ನಲ್ಲಿ ಮುಖ್ಯಮಂತ್ರಿ ರಾವತ್ ಅವರು ನಡೆಸಿದ್ದ ಜನತಾ ದರ್ಬಾಲ್ ವೇಳೆ ಘಟನೆಯೊಂದು ನಡೆದಿತ್ತು. ಮುಖ್ಯ ಶಿಕ್ಷಕಿಯಾಗಿದ್ದ ಉತ್ತರ ಬಹುಗುಣ ಅವರು ತಾವಿರುವ ಕುಗ್ರಾಮದಿಂದ ಬೇರೆಡೆಗೆ ವರ್ಗಾವಣೆ ಮಾಡವಂತೆ ಮನವಿ ಮಾಡಿಕೊಳ್ಳುವ ಸಲುವಾದಿ ಜನತಾ ದರ್ಬಾರ್'ಗೆ ಬಂದಿದ್ದರು. ವರ್ಗಾವಣೆ ಸಂಬಂಧ ಶಿಕ್ಷಕಿ ರಾವತ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಈ ವೇಳೆ ತೀವ್ರವಾಗಿ ಕೆಂಡಾಮಂಡಲಗೊಂಡ ಮುಖ್ಯಮಂತ್ರಿಗದಳು ಶಿಕ್ಷಕಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಶಿಕ್ಷಕಿಯನ್ನು ಅಮಾನತುಗೊಳಿಸಿ, ಬಂಧನಕ್ಕೊಳಪಡಿಸುವಂತೆ ಆದೇಶಿಸಿದ್ದರು. 
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲದೇ, ಸರ್ಕಾರದ ವಿರುದ್ದ ಹಲವು ಟೀಕೆಗಳು ವ್ಯಕ್ತವಾಗತೊಡಗಿದ್ದವು. 
ಈ ಎಲ್ಲಾ ಬೆಳವಣಿಗೆಗಳ ಬಳಿಕ ಹೇಳಿಕೆ ನೀಡಿದ್ದ ಉತ್ತರಾಖಂಡ ಶಿಕ್ಷಣ ಸಚಿವ ಅರವಿಂದ ಪಾಂಡೆ ಅವರು ಮುಖ್ಯಮಂತ್ರಿಗಳ ಪರವಾಗಿ ಕ್ಷಮೆಯಾಚಿಸಿದ್ದರು. ಸಮಸ್ಯೆಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು. 
ಅರವಿಂದ ಪಾಂಡೆಯವರ ಹೇಳಿಕೆಗೆ ಇದೀಗ ಪ್ರತಿಕ್ರಿಯೆ ನೀಡಿರುವ ಉತ್ತರ ಬಹುಗುಣ ಅವರು, ಶಿಕ್ಷಣ ಸಚಿವರೇಕೆ ಕ್ಷಮೆಯಾಚಿಸಬೇಕು. ಅವರು ಏನನ್ನೂ ಮಾಡಿಲ್ಲ. ತಪ್ಪು ಮಾಡಿರುವುದು ಮುಖ್ಯಮಂತ್ರಿಗಳು. ಮೊದಲು ಅವರು ಕ್ಷಮೆಯಾಚಿಸಬೇಕು. ನನ್ನನ್ನು ಅವಮಾನ ಮಾಡಿದ್ದು ಮುಖ್ಯಮಂತ್ರಿಗಳು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!