ನರೇಂದ್ರ ಮೋದಿ 
ದೇಶ

ನಾನು ಶಹೆನ್‏ಶಾಹ್ ಅಥವಾ ಚಕ್ರವರ್ತಿ ಅಲ್ಲ: ತಮ್ಮ ಭದ್ರತೆ ಬಗ್ಗೆ ಪ್ರಧಾನಿ ಮೋದಿ

ನಾನು ಶಹೆನ್‏ಶಾಹ್ ಅಥವಾ ಚಕ್ರವರ್ತಿ ಅಲ್ಲ. ಜನರೊಂದಿಗೆ ಬೆರೆಯುವುದರಿಂದ ಮತ್ತು ಅವರ ಶುಭಹಾರೈಕೆಗಳಿಂದ...

ನವದೆಹಲಿ: ನಾನು ಶಹೆನ್‏ಶಾಹ್ ಅಥವಾ ಚಕ್ರವರ್ತಿ ಅಲ್ಲ. ಜನರೊಂದಿಗೆ ಬೆರೆಯುವುದರಿಂದ ಮತ್ತು ಅವರ ಶುಭಹಾರೈಕೆಗಳಿಂದ ನನಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
'ಸ್ವರಾಜ್ಯ' ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಭದ್ರತೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತು ರೋಡ್ ಶೋ ನಡೆಸಬಾರದು ಎಂಬ ಬಗ್ಗೆ ಪ್ರತಿಕ್ರಿಯೆಸಿದ ಪ್ರಧಾನಿ ಮೋದಿ ಅವರು, ರಸ್ತೆಯಲ್ಲಿ ಜನ ನನ್ನ ಸ್ವಾಗತಿಸಲು ಮತ್ತು ಶುಭಾಶಯ ಕೋರಲು ಕಾಯುತ್ತಿದ್ದರೆ ನಾನು ಕಾರಿನಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ ಎಂದರು.
ನಾನು ಶಹೆನ್‏ಶಾಹ್ ಅಥವಾ ಚಕ್ರವರ್ತಿ ಅಲ್ಲ, ಜನರೊಂದಿಗೆ ಬೆರೆತರೆ ಮತ್ತಷ್ಟು ಶಕ್ತಿ ಬರುತ್ತದೆ. ನಾನು ಪ್ರಯಾಣ ಮಾಡಬೇಕಾದರೆ ರಸ್ತೆಯಲ್ಲಿ ಎಲ್ಲಾ ವಯೋಮಾನದ ನೂರಾರು ಜನರನ್ನು ನೋಡುತ್ತೇನೆ. ಅವರೆಲ್ಲರೂ ನನಗೆ ಶುಭಾಶಯ ಕೋರಲು ಮತ್ತು ಸ್ವಾಗತಿಸಲು ಬಂದಿರುತ್ತಾರೆ. ಅವರ ಪ್ರೀತಿ ಮತ್ತು ಹಾರೈಕೆಯನ್ನು ನೋಡಿಯೂ ನಾನು ಕಾರಿನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ನಕ್ಸಲರಿಂದ ಜೀವ ಬೇದರಿಕೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇತ್ತೀಚಿಗೆ ಗೃಹ ಸಚಿವಾಲಯ ಅವರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಸಾರ್ವಜನಿಕ ರ್ಯಾಲಿ ನಡೆಸದಂತೆ ಪ್ರಧಾನಿಗೆ ಸಲಹೆ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT