ದೇಶ

ವಿದ್ಯಾರ್ಥಿನಿಯರು ಇದೇ ಬಣ್ಣದ ಒಳ ಉಡುಪು ಧರಿಸಬೇಕು: ವಿವಾದಾತ್ಮಕ ಆದೇಶ ಹಿಂಪಡೆದ ಪುಣೆ ಶಾಲೆ

Lingaraj Badiger
ಪುಣೆ: ವಿದ್ಯಾರ್ಥಿನಿಯರ ಒಳ ಉಡುಪಿಗೂ ನಿರ್ಧಿಷ್ಟ ಬಣ್ಣ ನಿಗದಿ ಮಾಡುವ ಮೂಲಕ ಪೋಷಕರ ಹಾಗೂ ಮಕ್ಕಳ ಆಕ್ರೋಶಕ್ಕೆ ಗುರಿಯಾಗಿದ್ದ ಪುಣೆಯ ಮೀರ್ ಎಂಐಟಿ ಶಾಲೆ ಗುರುವಾರ ಕೊನೆಗೂ ತನ್ನ ವಿವಾದಾತ್ಮ ಆದೇಶವನ್ನು ಹಿಂಪಡೆದಿದೆ. 
ವಿಲಕ್ಷಣ ನಿಯಮ ಜಾರಿಗೊಳಿಸಲು ಮುಂದಾಗಿರುವ ಶಾಲೆಗೆ ಅಧಿಕಾರಿಗಳ ಸಮಿತಿಯೊಂದನ್ನು ಕಳುಹಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾವ್ಡೆ ಅವರು ಹೇಳಿದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ತನ್ನ ಆದೇಶವನ್ನು ಹಿಂಪಡೆದಿದೆ.
ವಿದ್ಯಾರ್ಥಿನಿಯರು ತೊಡುವ ಒಳ ಉಡುಪು ಬಿಳಿ ಅಥವಾ ಚರ್ಮದ ಬಣ್ಣದ್ದಾಗಿರಬೇಕು ಎಂದು ಶಾಲಾ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. ಅಲ್ಲದೆ  ಹುಡುಗಿಯರು ನಿಗದಿತ ಸಮಯದಲ್ಲಿ ಮಾತ್ರವೇ ಶೌಚಾಲಯಗಳನ್ನು ಬಳಸಬೇಕು ಎಂದೂ ನಿಯಮ ತಂದಿತ್ತು. ಇದಕ್ಕೆ ಪಾಲಕರು ಆಕ್ಷೇಪ ವ್ಯಕ್ತಪಡಿಸಿದರು ಕ್ಯಾರೇ ಎನ್ನದ ಆಡಳಿತ ಮಂಡಳಿ, ಹುಡುಗಿಯರ ಸುರಕ್ಷತೆಗಾಗಿ ಯುನಿಫಾರ್ಮ್‌ ನಿಯಮ ಜಾರಿಗೊಳಿಸಿದ್ದಾಗಿ ಸಬೂಬು ನೀಡಿತ್ತು.
ಶಾಲಾ ಆಡಳಿತ ಮಂಡಳಿಯ ಈ ಕ್ರಮದಿಂದ ಆಕ್ರೋಶಗೊಂಡ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಇಂದು ಈ ಬಗ್ಗೆ ಪ್ರತಿಕ್ರಿಯಿಸದ ಶಿಕ್ಷಣ ಸಚಿವರು, ಶಾಲೆಗೆ ಸಮಿತಿಯೊಂದನ್ನು ಕುಳುಹಿಸಿ, ಪರಿಶೀಲಿಸುವಂತೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ಸಮಿತಿಯ ವರದಿ ಆಧರಿಸಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದರು.
SCROLL FOR NEXT