ದೇಶ

ಹವಾಮಾನ ವೈಪರೀತ್ಯ: 3ನೇ ದಿನವೂ ಅಮರನಾಥ ಯಾತ್ರೆ ಸ್ಥಗಿತ

Shilpa D
ಜಮ್ಮು: ಹವಾಮಾನ ವೈಪರೀತ್ಯದಿಂದಾಗಿ  ಮೂರನೇ ದಿನವೂ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ. ಜಮ್ಮುವಿನಿಂದ ಮುಂದೆ ಸಾಗಲು ಯಾತ್ರಾರ್ಥಿಗಳಿಗೆ ಅವಕಾಶ ನೀಡಿಲ್ಲ.
ಅಮರನಾಥ ಯಾತ್ರೆಯ ಭಕ್ತಾದಿಗಳು, ಕಾಶ್ಮೀರ ಕಣಿವೆಯ ಬಾಲ್ತಾಲ್ ಮತ್ತು ಪಹಲ್ಗಾಮ್ ಬೇಸ್ ಕ್ಯಾಂಪ್ ನಲ್ಲೇ ಉಳಿದುಕೊಂಡಿದ್ದಾರೆ. ಒಂದು ವೇಳೆ ಹವಾಮಾನದಲ್ಲಿ ಸುಧಾರಣೆ ಕಂಡು ಬಂದರೇ ಅಧಿಕಾರಿಗಳು ಮುಂದಿನ ನಿರ್ಧಾರದ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಬಂದಿರುವ ಸುಮಾರು 30 ಸಾವಿರ ಯಾತ್ರಿಕರು ಈ ಎರಡು ಬೇಸ್ ಕ್ಯಾಂಪ್ ನಲ್ಲಿ ಉಳಿದುಕೊಂಡಿದ್ದಾರೆ. ಶುಕ್ರವಾರ ರಾಜ್ಯಪಾಲ ಎನ್ ಎನ್ ವೊಹ್ರಾ ಬಾಲ್ತಾಲ್ ಗೆ ಭೇಟಿ ನೀಡಲಿದ್ದಾರೆ.
ಜೂನ್ 28 ರಂದು ಆರಂಭವಾಗಿರುವ ಅಮರನಾಥ ಯಾತ್ರೆಯಲ್ಲಿ ಈ ಬಾರಿ 68 ಸಾವಿರ ಭಕ್ತಾದಿಗಳು ಭಾಗವಹಿಸಿದ್ದಾರೆ.
SCROLL FOR NEXT