ಸಾಂದರ್ಭಿಕ ಚಿತ್ರ 
ದೇಶ

ಬಿಹಾರ: 10ನೇ ತರಗತಿ ಹುಡುಗಿಯ ಮೇಲೆ 15 ವಿದ್ಯಾರ್ಥಿಗಳಿಂದ ಅತ್ಯಾಚಾರ; ಪ್ರಿನ್ಸಿಪಾಲ್ ಸೇರಿ ನಾಲ್ವರ ಬಂಧನ

ಬಿಹಾರದ ಸರನ್ ಜಿಲ್ಲೆಯ ಖಾಸಗಿ ಶಾಲೆಯ ಆವರಣದಲ್ಲಿ ಏಳು ತಿಂಗಳ ಹಿಂದೆ ಮೂವರು ಶಿಕ್ಷಕರು, 15 ವಿದ್ಯಾರ್ಥಿಗಳು, 10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಾಟ್ನಾ: ಬಿಹಾರದ ಸರನ್ ಜಿಲ್ಲೆಯ ಖಾಸಗಿ ಶಾಲೆಯ ಆವರಣದಲ್ಲಿ ಏಳು ತಿಂಗಳ ಹಿಂದೆ   ಮೂವರು ಶಿಕ್ಷಕರು , 15 ವಿದ್ಯಾರ್ಥಿಗಳು , 10 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಆಘಾತವನ್ನು ಮತ್ತಷ್ಟು ತಾಳಿಕೊಳ್ಳಲು ಸಾಧ್ಯವಾಗದ  14 ವರ್ಷದ ಬಾಲಕಿ  ತನ್ನ ತಂದೆಯೊಂದಿಗೆ ಇಂದು  ಪೊಲೀಸರನ್ನು ಸಂಪರ್ಕಿಸಿ  15  ವಿದ್ಯಾರ್ಥಿಗಳು , ಪ್ರಿನ್ಸಿಪಾಲ್ ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಬಳಿಕ ದಿಪೇಶ್ವರ್ ಬಾಲ್ ವಿದ್ಯಾನಿಕೇತನ್ ಶಾಲೆ ಬಳಿ ತೆರಳಿದ ಪೊಲೀಸರ ತಂಡ , ಎಫ್ ಐಆರ್ ನಲ್ಲಿ ಹೆಸರು ಉಲ್ಲೇಖಿಸಿರುವ ನಾಲ್ವರನ್ನು ಬಂಧಿಸಿದ್ದಾರೆ. ಪ್ರಿನ್ಸಿಪಾಲ್ ಉದಯ್ ಕುಮಾರ್ ಸಿಂಗ್,  ಶಿಕ್ಷಕ ಬಾಲಾಜಿ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಉಳಿದ 14 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಎಕ್ಮಾ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ  ಅನುಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆಕೆಯನ್ನು ಚಾಪ್ರದದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಬಳಿಕ ಆರೋಪಿಗಳನ್ನು ಬಂಧಿಸಲಾಯಿತು.
 ವಿದ್ಯಾರ್ಥಿನಿ ನೀಡಿರುವ ದೂರಿನ ಪ್ರಕಾರ  ಕಳೆದ ಡಿಸೆಂಬರ್ ತಿಂಗಳಲ್ಲಿ ಶಾಲೆಯ ಶೌಚಾಲಯದಲ್ಲಿ ಆಕೆಯ ಮೇಲೆ ಐವರು ವಿದ್ಯಾರ್ಥಿಗಳು ಅತ್ಯಾಚಾರ ಮಾಡಿ, ಅದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ನಂತರದ ದಿನಗಳಲ್ಲಿ  ಈ ವಿಡಿಯೋ ತೋರಿಸಿ ಇತರ  ಬೆದರಿಕೆಯೂಡ್ಡಿ  ಇತರ ವಿದ್ಯಾರ್ಥಿಗಳೊಂದಿಗೆ  ಆಗಾಗ್ಗೆ ಅತ್ಯಾಚಾರ ನಡೆಸಿದ್ದಾರೆ.
ವಿಡಿಯೋ ವೀಕ್ಷಿಸಿದ ಪ್ರಿನ್ಸಿಪಾಲ್  ಹಾಗೂ ಇಬ್ಬರು ಶಿಕ್ಷಕರು ಕೂಡಾ ಘಟನೆ ನಡೆದ 17 ದಿನಗಳ ನಂತರ ಸಂತ್ರಸ್ತೆಯನ್ನು ಬೆದರಿಸಿ, ಒಂದು ತಿಂಗಳವರೆಗೂ ಶಾಲಾ ಆವರಣದಲ್ಲಿಯೇ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆಯ ತಂದೆ ಬಿಹಾರದ ಹೊರಗಡೆ ಕೆಲಸ ಮಾಡುತ್ತಾರೆ, ಮನೆಗೆ ಬಂದಾಗ ಬಾಲಕಿ ಈ ವಿಷಯವನ್ನು ತಿಳಿಸಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಆಕೆ ಹಾಗೂ ಆಕೆಯ ತಂದೆ ಶಾಲೆ ಬಳಿಗೆ ಬಂದಾಗ ಮೂವರು ಶಿಕ್ಷಕರು ಎದುರಿಸಿದ್ದಾರೆ. ತಂದೆ ಮಗಳ ಮೇಲೆ ಹಲ್ಲೆ ಮಾಡಲಾಗಿದ್ದು, ಶಾಲೆಯಿಂದ ಕಿತ್ತುಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT