ಬೆಳೆಗಳಿಗೆ ಎಂಎಸ್ ಪಿ ಹೆಚ್ಚಳ : ತೀವ್ರ ರಕ್ತಸ್ರಾವದಲ್ಲಿ ಬ್ಯಾಂಡೇಡ್ ಇದ್ದಂತೆ- ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರಮೋದಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ತೀವ್ರ ರಕ್ತಸ್ರಾವದಲ್ಲಿ ಬ್ಯಾಂಡೇಡ್ ಇದ್ದಂತೆ ಆಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ಟೀಕಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರಮೋದಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ತೀವ್ರ ರಕ್ತಸ್ರಾವದಲ್ಲಿ ಬ್ಯಾಂಡೇಡ್ ಇದ್ದಂತೆ ಆಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ಟೀಕಿಸಿದ್ದಾರೆ.
ಇದು ಕೇವಲ ಮಾರ್ಕೆಟಿಂಗ್ ಎಂದಿರುವ ರಾಹುಲ್ ಗಾಂಧಿ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು ಕರ್ನಾಟಕ ಸರ್ಕಾರದ ರೈತರ ಕೃಷಿ ಸಾಲದ ಜೊತೆ ಹೋಲಿಕೆ ಮಾಡಿದ್ದಾರೆ.
ಮೋದಿ ಸರ್ಕಾರ 120 ಮಿಲಿಯನ್ ರೈತರಿಗೆ 15 ಸಾವಿರ ಕೋಟಿ ಬಜೆಟ್ ನೀಡಿದ್ದರೆ, ಕರ್ನಾಟಕ ಸರ್ಕಾರ 34 ಸಾವಿರ ಕೋಟಿ ರೂಪಾಯಿ ವೆಚ್ಚದ ರೈತರ ಕೃಷಿ ಸಾಲ ಮನ್ನಾ ಮಾಡುವ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ದೇಶದ 120 ಮಿಲಿಯನ್ ರೈತರಿಗೆ ಬಜೆಟ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಕೇವಲ 15 ಸಾವಿರ ಕೋಟಿ ರೂಪಾಯಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ತೀವ್ರ ರಕ್ತಸ್ರಾವದಲ್ಲಿ ಬ್ಯಾಂಡೇಡ್ ಇದ್ದಂತೆ ಆಗಿದೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.