ತಿರುವನಂತಪುರ: 5ನೇ ತರಗತಿ ಬಾಲಕಿ ಹಣೆಗೆ ಬಿಂದಿ ಇಟ್ಟಿದ್ದಕ್ಕಾಗಿ ಮದ್ರಾಸಾದಿಂದ ಹೊರಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕಿರು ಚಿತ್ರವೊಂದರಲ್ಲಿ ತನಗೆ ನೀಡಲಾದ ಪಾತ್ರವನ್ನು ವಹಿಸುವುದಕ್ಕಾಗಿ ಹಣೆಯಲ್ಲಿ ಶ್ರೀಗಂಧದ ಬಿಂದಿಯನ್ನು ಹಾಕಿಕೊಂಡ ಕಾರಣಕ್ಕೆ ಐದನೇ ತರಗತಿಯ ವಿದ್ಯಾರ್ಥಿನಿಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ.
ಬಾಲಕಿಯ ತಂದೆ ಮದ್ರಸದ ಈ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ. "ನನ್ನ ಮಗಳನ್ನು ಮದ್ರಸದಿಂದ ಉಚ್ಚಾಟಿಸಲಾಗಿರುವುದು ದುರದೃಷ್ಟಕರ, ಆಕೆಗೆ ಕಲ್ಲು ಹೊಡೆಯದಿರುವುದೇ ನಮ್ಮ ಅದೃಷ್ಟ ಎಂದು ವಿದ್ಯಾರ್ಥಿನಿಯ ತಂದೆ ಉಮ್ಮರ್ ಮಲಾಯಿಲ್ ಅವರು ಫೇಸ್ ಬುಕ್‌ನಲ್ಲಿ ಹಾಕಿರುವ ಪೋಸ್ಟ್‌ಗೆ 7,500 ಲೈಕ್‌ಗಳು ಬಂದಿದ್ದು 2,700 ಮಂದಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ.
ನನ್ನ ಮಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾಳೆ. ನೃತ್ಯ, ಹಾಡುಗಾರಿಕೆಯಲ್ಲಿ ನಿರತಳಾಗಿದ್ದಾಳೆ. ಮದ್ರಸ ಮಟ್ಟದ ಸ್ಪರ್ಧೆಯಲ್ಲಿ ಆಕೆ ತನ್ನ ಶಾಲೆಗೆ ಹಲವಾರು ಬಹುಮಾನಗಳನ್ನು ಗೆದ್ದು ತಂದಿದ್ದಾಳೆ; ಇದರ ಹೊರತಾಗಿಯೂ ಆಕೆಯನ್ನು ಮದ್ರಸದಿಂದ ಉಚ್ಚಾಟಿಸಿರುವುದು ನನಗೆ ಆಘಾತ ತಂದಿದೆ.
ಆಕೆ ತನ್ನ ಹಣೆಯಲ್ಲಿ, ಅದೂ ಕಿರುಚಿತ್ರವೊಂದರಲ್ಲಿ ನಟಿಸುವುದಕ್ಕಾಗಿ, ಬಿಂದಿ ಹಾಕಿಕೊಂಡದ್ದಕ್ಕಾಗಿ ಆಕೆಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ' ಎಂದು ಬಾಲಕಿಯ ತಂದೆ ಮಲಾಯಿಲ್ ಅವರು ತಮ್ಮ ಫೇಸ್ ಬುಕ್‌ನಲ್ಲಿ ಮಲಯಾಳಂನಲ್ಲಿ ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos