ಕನ್ಸಾಸ್'ನಲ್ಲಿ ಭಾರತೀಯನ ಹತ್ಯೆ: ಸುಷ್ಮಾ ಸ್ವರಾಜ್ ಸಾಂತ್ವನ, ನೆರವಿನ ಭರವಸೆ
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಮೆರಿಕದ ಕನ್ಸಾಸ್ ಸಿಟಿಯಲ್ಲಿ ಹತ್ಯೆಗೀಡಾದ ಭಾರತೀಯ ಮೂಲದ ವಿದ್ಯಾರ್ಥಿಯ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ತಾವು ಕನ್ಸಾಸ್ ಪೋಲೀಸರ ಜತೆ ಘಟನೆ ಜತೆ ಸಂಪರ್ಕದಲ್ಲಿರುವುದಾಗಿ ಸಚಿವರು ಭರವಸೆ ನಿಡಿದ್ದಾರೆ. ಹಾಗೆಯೇ ಹತ್ಯೆಗೀಡಾದ ವಿದ್ಯಾರ್ಥಿಯ ಕುಟುಂಬಕ್ಕೆ ಎಲ್ಲಾ ಬಗೆಯ ನೆರವು ನೀಡುವುದಾಗಿ ಅವರು ಹೇಳಿದರು.
"ಕನ್ಸಾಸ್ ಘಟನೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ಕುಟುಂಬಕ್ಕೆ ನಾವು ಎಲ್ಲಾ ಬಗೆಯ ನೆರವು ನೀಡುತ್ತೇವೆ, ಅವರಿಗೆ ನನ್ನ ತುಂಬು ಹೃದಯದ ಸಾಂತ್ವನ ಸಲ್ಲಿಸುತ್ತೇನೆ. ಘಟನೆ ಕುರಿತಂತೆ ಪೋಲೀಸರ ತನಿಖೆಯ ಮಾಹಿತಿ ಪಡೆಯುತ್ತೇವೆ" ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಭಾರತದ ತೆಲಂಗಾಣ ರಾಜ್ಯ ಮೂಲದವನಾದ ವಿದ್ಯಾರ್ಥಿ ಶರತ್ ಕೊಪ್ಪು ಕನ್ಸಾಸ್ ಮಾರ್ಕೆಟ್ ಪ್ರದೇಶದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದನು.
ಪ್ರಕರಣ ಸಂಬಂಧ ಕನ್ಸಾಸ್ ನಗರ ಪೊಲೀಸರು, ಶಂಕಿತರ ಕುರಿತು ಯಾವುದೇ ರೀತಿಯ ಮಾಹಿತಿಗಳನ್ನು ನೀಡಿದ್ದು ಆರೋಪಿಗಳನ್ನು ಹಿಡಿದುಕೊಟ್ಟವರಿಗೆ 10 ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದ್ದರು
ವಿದ್ಯಾರ್ಥಿಯ ಸೋದರ ಸಂಬಂಧಿ ಎಎನ್ ಐ ಜತೆ ಮಾತನಾಡಿ ಗುರುತಿಸಲಾಗದ ದುಷ್ಕರ್ಮಿಗಳ ಗುಂಪೊಂದು ಕನ್ಸಾಸ್ರೆಸ್ಟೋರೆಂಟ್ ಒಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದೆ.ಈ ಸಂದರ್ಭದಲ್ಲಿ ಶರತ್ ದೇಹಕ್ಕೆ ಐದು ಗುಂಡುಗಳು ಹೊಕ್ಕವು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಬದುಕುಳಿಯಲಿಲ್ಲ.
ಈ ವರ್ಷ ಜನವರಿಯಲ್ಲಿ ಶರತ್ ಕನ್ಸಾಸ್ ನ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡುವುದಕ್ಕಾಗಿ ವಿದ್ಯಾರ್ಥಿ ವೇತನ ಸೌಲಭ್ಯ ಪಡೆದಿದ್ದನು. ಆದರೆ ನಿನ್ನೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ, ಇದು ನಮ್ಮ ಪಾಲಿಗೆ ಅತ್ಯಂತ ದುಃಖದ ದಿನ ಎಂದಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ ಅವರು ಶರತ್ ಅಂತ್ಯ ಸಂಸ್ಕಾರಕ್ಕಾಗಿ ದೇಹವನ್ನು ಹೈದರಾಬಾದ್ ಗೆ ಕಳಿಸುವಂತೆ ಅಮೇರಿಕಾದಲ್ಲಿರುವ ಭಾರತೀಯ ದೂತಾವಾಸವನ್ನು ಕೋರಿದ್ದಾರೆ.