ಪ್ರಧಾನಿ ಮೋದಿ ರ್ಯಾಲಿಗೆ ಜನ ಸೇರಿಸಲು 7 ಕೋಟಿ ರು. ಖರ್ಚು!
ರಾಜಸ್ತಾನದಲ್ಲಿ ಆಡಳಿತ ವಿರೋಧಿ ಅಲೆ ಹೊಂದಿರುವ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಪ್ರಧಾನಿ...
ಜೈಪುರ: ರಾಜಸ್ತಾನದಲ್ಲಿ ಆಡಳಿತ ವಿರೋಧಿ ಅಲೆ ಹೊಂದಿರುವ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗಳನ್ನು ಆಯೋಜಿಸುತ್ತಿದ್ದು ಇದಕ್ಕಾಗಿ ಬರೋಬ್ಬರಿ 7 ಕೋಟಿ ರುಪಾಯಿ ವಿನಿಯೋಗಿಸಿದೆ ಎಂದು ತಿಳಿದುಬಂದಿದೆ.
ಜೈಪುರದಲ್ಲಿ ನಿನ್ನೆ ನಡೆದ ಸಾರ್ವಜನಿಕ ಸಮಾವೇಶದಿಂದ ಮೋದಿ ರ್ಯಾಲಿಗಳಿಗೆ ಚಾಲನೆ ನೀಡಲಾಗಿದೆ. ಇನ್ನು ಸಮಾವೇಶಕ್ಕೆ ಜನರನ್ನು ಕರೆತರಲು ಬಿಜೆಪಿ ಸರ್ಕಾರ ಬರೋಬ್ಬರಿ 7 ಕೋಟಿ ರುಪಾಯಿ ವಿನಿಯೋಗಿಸುತ್ತಿದೆ ಎಂದು ತಿಳಿದುಬಂದಿದೆ.
ಸಮಾವೇಶಕ್ಕೆ ಕೇಂದ್ರ ಸರ್ಕಾರದ 12 ಸಾಮಾಜಿಕ ಕಲ್ಯಾಣ ಯೋಜನೆಗಳ 2.5 ಲಕ್ಷ ಫಲಾನುಭವಿಗಳನ್ನು 33 ಜಿಲ್ಲೆಗಳಿಂದ 5500ಕ್ಕೂ ಹೆಚ್ಚಿನ ಬಸ್ ಗಳ ಮೂಲಕ ಕರೆತರುವ ಗುರಿಯನ್ನು ಸರ್ಕಾರ ಹಾಕಿಕೊಂಡಿದ್ದು ಬಸ್ ಬಾಡಿಗೆಗಾಗಿ 7 ಕೋಟಿ ವಿನಿಯೋಗಿಸುತ್ತಿದೆ.
ಮೋದಿ ಅವರಿಗೆ ಜೀವ ಬೆದರಿಕೆ ಇರುವುದರಿಂದ ಜೈಪುರದಲ್ಲಿ ಭದ್ರತೆಯನ್ನು ದುಪ್ಪಟ್ಟುಗೊಳಿಸಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು.