ಮುಂಬೈ: ಪ್ರಣಬ್ ಬಳಿಕ ಆರ್ ಎಸ್ ಎಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರರತನ್ ಟಾಟಾ!
ಮುಂಬೈ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿಕ ಉದ್ಯಮಿ ರತನ್ ಟಾಟಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಉದ್ಯಮಿ ರತನ್ ಟಾಟಾ ಮುಂದಿನ ತಿಂಗಳು ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ನಾನಾ ಪಾಲ್ಕರ್ ಸ್ಮೃತಿ ಸಮಿತಿಯಿಂದ ಆಗಸ್ಟ್ 24 ರಂದು ಮುಂಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಟಾಟಾ ಹಾಗೂ ಭಾಗವತ್ ಭಾಗಿಯಾಗಲಿದ್ದಾರೆ ಎಂದು ಸಂಘದ ಕಾರ್ಯಕರ್ತರು ಪಿಟಿಐಗೆ ತಿಳಿಸಿದ್ದಾರೆ.
ಮುಂಬೈ ಮೂಲದ ಎನ್ಜಿಒ ಸಂಘದ ಪ್ರಚಾರಕ ನಾನಾ ಪಾಲ್ಕರ್ ಅವರ ಹೆಸರನ್ನು ಹೊಂದಿದೆ. . ಮುಂಬೈಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಮೀಪವೇ ಈ ಸಂಸ್ಥೆಯ ಕಛೇರಿಯೂ ಇದೆ.ಈ ಸಂಘಟನೆಯು ಕ್ಯಾನ್ಸರ್ ರೋಗಿಗಳಿಗೆ ನೆರವು ಸಲ್ಲಿಸುತ್ತಿದೆ.
ಟಾಟಾ ಅವರು ಈ ಎನ್ಜಿಒ ಕಛೇರಿಗೆ ಭೇಟಿ ನೀಡಿದ್ದಾರೆ. ಈ ಸಂಘಟನೆಯ ಕಾರ್ಯಚಟುವಟಿಕೆ,, ಸಂಘ ಪರಿವಾರದ ಹಿನ್ನೆಲೆಯನ್ನೂ ಅವರು ಅರಿತಿದ್ದಾರೆ ಎಂದು ಸಂಘದ ಕಾರ್ಯಕಾರಿಣಿ ಹೇಳಿದೆ. ಆಗಸ್ಟ್ 24ರಂದು ನಾನಾ ಪಾಲ್ಕರ್ ನ ಶತಮಾನೋತ್ಸವದ ಆಚರಣೆಯು ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics