ದೇಶ

ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ: 3 ಗಂಟೆಗಳ ಕಾಲ ಮಹಿಳೆಯ ಪ್ರಿಯಕರನ ವಿಚಾರಣೆ

Shilpa D
ನವದೆಹಲಿ: ದೆಹಲಿಯ ಬುರಾರಿಯ ಚುಂದಾವತ್ ಕುಟುಂಬದ ಸಾಮೂಹಿತ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೂ ಸುಮಾರು 200 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಪೊಲೀಸರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಕಾಯುತ್ತಿದ್ದಾರೆ.  ವರದಿ ಬಂದ ನಂತರ, ಮೃತ ದೇಹಗಳ ಮನೋ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಿದ್ದಾರೆ,
33 ವರ್ಷದ ಪ್ರಿಯಾಂಕಾ ಭಾಟಿಯಾ ಅವರ ಪ್ರಿಯಕರನನ್ನು ಈ ಸಂಬಂಧ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ,. ಆ ಕುಟುಂಬ ಯಾವ ರೀತಿಯ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿತ್ತು ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
ಸುಮಾರು 3 ಗಂಟೆಗಳ ಕಾಲ ಆತನ ವಿಚಾರಣೆ ನಡೆಸಲಾಗಿದ್ದು., ಪ್ರಿಯಾಂಕಾ ಬಾಟಿಯಾಗೆ ಮಂಗಳಿಕ ದೋಷ ಇತ್ತು ಹೀಗಾಗಿ ಆಕೆಗೆ ಬೇಗ ವಿವಾಹವಾಗಿರಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. 
SCROLL FOR NEXT