ದೇಶ

ಅತ್ಯಾಚಾರಿಗಳಿಗೆ 30 ಸಾವಿರ ದಂಡ, ದಂಡದ ದುಡ್ಡಲ್ಲಿ ಪಂಚಾಯ್ತಿಯಿಂದ ಮಟನ್ ಪಾರ್ಟಿ!

Vishwanath S
ರಾಯ್ಪುರ್: ಛತ್ತೀಸ್ ಗಢ ಬುಡಕಟ್ಟು ಜಸ್ಪುರ್ ಜಿಲ್ಲೆಯಲ್ಲಿ ಪಂಚಾಯ್ತಿಯೊಂದು ಮೂವರು ಅತ್ಯಾಚಾರಿ ಆರೋಪಿಗಳಿಗೆ ತಲಾ 10 ಸಾವಿರ ರುಪಾಯಿ ದಂಡ ವಿಧಿಸಿದ್ದು ಸಂಗ್ರಹವಾದ ಹಣವನ್ನು ಸಂತ್ರಸ್ತ ಯುವತಿಯ ಪೋಷಕರಿಗೆ ನೀಡದೆ ಹಣದಲ್ಲಿ ಮಟನ್ ಪಾರ್ಟಿ ಮಾಡಿರುವ ಪ್ರಕರಣ ವರದಿಯಾಗಿದೆ. 
ಜುಲೈ 5ರಂದು ಪಂಚಾಯ್ತಿ ಓರ್ವ ಯುವತಿ ಹಾಗೂ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳ ಪೋಷಕರಿಗೆ ತಲಾ 10 ಸಾವಿರ ರುಪಾಯಿ ದಂಡ ವಿಧಿಸಿದೆ. ನಂತರ ಸಂಗ್ರಹವಾದ ಹಣದಲ್ಲಿ ಗ್ರಾಮಕ್ಕೆ ಮಟನ್ ಊಟ ಹಾಕಿಸಿದ್ದು ಉಳಿದ ಹಣವನ್ನು ಸಮುದಾಯ 45 ಮಂದಿಗೆ ಸಮನಾಗಿ ಹಂಚಿದ್ದಾರೆ. 
ಇದರಿಂದ ಬೇಸರಗೊಂಡ ಸಂತ್ರಸ್ತ ಯುವತಿಯರ ತಂದೆಯೊರ್ವರು ಪತ್ರಕರ್ತರ ಮುಂದೆ ತಮ್ಮ ಅಳಲನ್ನು ತೊಡಿಕೊಂಡಿದ್ದರು. ವಿಷಯ ತಿಳಿದ ಬಳಿಕ ಜಸ್ಪುರ್ ಎಎಸ್ಪಿ ಉನೆಜಾ ಅನ್ಸಾರಿ ಅವರು ಗ್ರಾಮಕ್ಕೆ ಪೊಲೀಸರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದರು.
SCROLL FOR NEXT