ದೇಶ

ಅಮೆರಿಕಾ ನಿರ್ಬಂಧ ಹಿನ್ನೆಲೆ: ಜೂನ್ ನಲ್ಲಿ ಇರಾನ್ ನಿಂದ ತೈಲ ಆಮದು ಪ್ರಮಾಣ ಇಳಿಕೆ

Raghavendra Adiga
ನವದೆಹಲಿ: ಇರಾನ್ ನಿಂದ ಭಾರತಕ್ಕೆ ಆಮದಾಗುವ ತೈಲದಲ್ಲಿ ಜೂನ್ ತಿಂಗಳಲ್ಲಿ 15.9 ಪ್ರತಿಶತದಷ್ಟು ಕಡಿತವಾಗಿದೆ. ಅಮೆರಿಕಾವು ಇರಾನ್ ಮೇಲೆ ನಿರ್ಬಂಧವನ್ನು ವಿಸ್ತರಿಸಿಅಲಿದೆ ಎಂದು ತಿಳಿದುಬಂದ ನಂತರ ಈ ಬೆಳವಣಿಗೆ  ನಡೆದಿದೆ.
ಶಿಪ್ಪಿಂಗ್ ಮತ್ತು ಇಡಸ್ಟ್ರಿ ಮೂಲಗಳ ಪ್ರಕ್ಕಾರ ಜೂನ್ ತಿಂಗಳಲ್ಲಿ ಭಾರತವು ಇರಾನ್ ನಿಂದ 592,800 ಬ್ಯಾರಲ್ ಪರ್ ಡೇ(ಬಿಪಿಡಿ) ತೈಲ ಆಮದು ಮಾಡಿಕೊಂಡಿದೆ ಇದಕ್ಕೆ ಹಿಂದೆ ಮೇ ತಿಂಗಳಲ್ಲಿ 705,200 ಬಿಪಿಡಿ ತೈಲ ಆಮದಾಗಿತ್ತು.
ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾದ ನಂತರದ ಸ್ಥಾನ ಭಾರತದ್ದಾಗಿದೆ. ಆದರೆ ಇದೀಗ ರಾಷ್ಟ್ರವು ತೈಲ ರಿಫೈನರ್ ಗಳಿಗೆ  ಪರ್ಯಾಯ ತೈಲ ಸರಬರಾಜು ಮೂಲಗಳನ್ನು ಪತ್ತೆ ಮಾಡುವಂತೆ ಕೇಳಿದೆ. ಏಕೆಂದರೆ ಅಮೆರಿಕಾ ನವೀಕರಿಸಿದ ನಿರ್ಬಂಧದ ಅನುಸಾರ ಟೆಹರಾನ್ನಿಂದ ತೈಲ ಆಮದನ್ನು ಭಾರತ ಮುಂದುವರಿಸಬೇಕಿದೆ
ಇರಾನ್, ರಷ್ಯಾ, ಚೀನಾ, ಫ್ರಾನ್ಸ್, ಜರ್ಮನಿ, ಮತ್ತು ಬ್ರಿಟನ್ ನೊಂದಿಗೆ 2015 ರ ಲ್ಲಿ ಮಾಡಿಕೊಂಡ ಒಪ್ಪಂದ ರದ್ದುಗೋಲಿಸಿದ ಬಳಿಕ ಅಮೆರಿಕಾ ಇರಾನ್ ಮೇಲಿನ ತನ್ನ ನಿರ್ಬಂಧವನ್ನು ನವೀಕರಿಸಿದೆ. ಅದೇ ವೇಳೆ ಟೆಹರಾನ್ ತಾನು ಅಮೆರ್ಕಾದೊಡನೆ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಂತೆ ಅದರ ಪರಮಾಣು ಚಟುವಟಿಕೆಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದೆ.
ಖಾಸಗಿ ತೈಲ ರಿಫೈನರಿಗಳು ಜೂನ್ ನಲ್ಲಿ ಇರಾನ್ ನಿಂದ ತೈಲ ಆಮದು ಪ್ರಮಾಣವನ್ನು ಕಡಿತಗೊಳಿಸಿದ್ದರೂ ರಾಜ್ಯ ಒಡೆತನದ ತೈಲ ರಿಫೈನರಿಗಳು ತೈಲ ಆಮದಿನ ಪ್ರಮಾಣವನ್ನು ಹೆಚ್ಚಳ ಮಾಡಿದೆ..
SCROLL FOR NEXT