ಶವ ಸಾಗಾಟ ವಾಹನ ಸಿಗದೆ ದ್ವಿಚಕ್ರ ವಾಹನದಲ್ಲೇ ತಾಯಿಯ ಶವ ಸಾಗಿಸಿದ ಪುತ್ರ! 
ದೇಶ

ಮಧ್ಯ ಪ್ರದೇಶ: ಶವ ಸಾಗಿಸುವ ವಾಹನ ಸಿಗದೆ ದ್ವಿಚಕ್ರ ವಾಹನದಲ್ಲೇ ತಾಯಿಯ ಶವ ಸಾಗಿಸಿದ ಪುತ್ರ!

ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದ ತನ್ನ ತಾಯಿಯ ಮೃತದೇಹವನ್ನು ಸರಿಯಾದ ಸಮಯಕ್ಕೆ ಶವ ಸಾಗಣಿಕೆ ವಾಹನ ಸಿಗದ ಕಾರಣ ಮಗನೊಬ್ಬ ಮೋಟಾರ್ ಬೈಕ್ ನಲ್ಲಿ ಸಾಗಿಸಿದ ಘಟನೆ ಮದ್ಯ ಪ್ರದೇಶದಲ್ಲಿ ನಡೆದಿದೆ.

ತಿಕಂಘರ್ (ಮಧ್ಯ ಪ್ರದೇಶ):.ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದ ತನ್ನ ತಾಯಿಯ ಮೃತದೇಹವನ್ನು ಸರಿಯಾದ ಸಮಯಕ್ಕೆ ಶವ ಸಾಗಣಿಕೆ ವಾಹನ ಸಿಗದ ಕಾರಣ ಮಗನೊಬ್ಬ  ಮೋಟಾರ್ ಬೈಕ್ ನಲ್ಲಿ ಸಾಗಿಸಿದ ಘಟನೆ ಮದ್ಯ ಪ್ರದೇಶದಲ್ಲಿ ನಡೆದಿದೆ. 
ಸೋಮವಾರದಂದು ಹಾವು ಕಚ್ಚಿ ಮೃತಪಟ್ಟಿದ್ದ ಕುನ್ವರ್ ಬಾಯಿ ಎಂಬ ಮಹಿಳೆಯ ಶವವನ್ನು ಆಕೆಯ ಪುತ್ರ ಮೋಟಾರ್ ಬೈಕ್ ನಲ್ಲಿ ಸಾಗಿಸಿರುವ ಕರುಣಾಜನಕ ಘಟನೆ ಮಧ್ಯಪ್ರದೇಶದ ಮೋಹನ್‌ಗಢ ಎನ್ನುವಲ್ಲಿ ನಡೆದಿದೆ.
ಕುನ್ವರ್ ಬಾಯಿ ಹಾವು ಕಚ್ಚಿ ಸತ್ತ ಬಳಿಕ ಮೋಹನ್‌ಗಢದ  ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. ಆದರೆ ಇದಕ್ಕಾಗಿ ಶವ ಸಾಗಣೆ ಮಾಡಲು ಶವ ಸಾಗಾಟ ವಾಹನ ಕಳುಹಿಸಲು ಆಸ್ಪತ್ರೆಯವರು ಹಿಂದೇಟು ಹಾಕಿದ್ದಾರೆ. ಆಗ ಮಹಿಳೆಯ ಪುತ್ರ ತಾನೇ ಬೈಕ್ ನಲ್ಲಿ ಶವವನ್ನಿತ್ಟು ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ.
ಕುನ್ವರ್ ಬಾಯಿ ಪುತ್ರ ಹಾಗೂ ಆಕೆಯ ಸಂಬಂಧಿಗಳು ಹೀಗೆ ಬೈಕ್ ನಲ್ಲಿ ಶವ ಸಾಗಿಸಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಮಾದ್ಯಮಗಳಲ್ಲಿ ಈ ಘಟನೆ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಪ್ರಕರಣ ಕುರಿತಂತೆ ತನಿಖೆ ನಡೆಸಲು ಸೂಚಿಸಿದೆ."ನನಗೆ ಇದರ ಕುರಿತಂತೆ ಹೆಚ್ಚು ವಿವರ ತಿಳಿದಿಲ್ಲ, ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸೂಚಿಸಿದ್ದೇಬ್ನೆ" ಜಿಲ್ಲೆಯ ಹಿರಿಯ ಅಧಿಕಾರಿ ಎಸ್‌.ಕೆ. ಅಹಿರ್ವಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

SCROLL FOR NEXT