ದೇಶ

ರಾಜ್ಯಸಭಾ ಸದಸ್ಯರು 22 ಅಧಿಕೃತ ಭಾಷೆಗಳಲ್ಲಿ ಮಾತನಾಡಬಹುದು

Lingaraj Badiger
ನವದೆಹಲಿ: ಮುಂಬರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ರಾಜ್ಯಸಭಾ ಸದಸ್ಯರು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ 22 ಅಧಿಕೃತ ಭಾಷೆಗಳಲ್ಲಿ ಮಾತನಾಡಬಹುದು.
ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರು ಮುಂಗಾರು ಅಧಿವೇಶನದಲ್ಲಿ 22 ಭಾಷೆಗಳಲ್ಲಿ ಯಾವ ಭಾಷೆ ಬೇಕಾದರೂ ಮಾತನಾಡಬಹುದಾಗಿದೆ.
ನಾಯ್ಡು ಅವರು ರಾಜ್ಯಸಭಾ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣವೇ, ಸದಸ್ಯರು 22 ಭಾಷೆಗಳ ಪೈಕಿ ಯಾವ ಭಾಷೆಯಾದರೂ ಮಾತನಾಡುವ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಮಾತೃ ಭಾಷೆಯಲ್ಲಿ ಮಾತನಾಡುವುದರಿಂದ, ನಮ್ಮ ವಿಚಾರಗಳನ್ನು ಉತ್ತಮವಾಗಿ ಮಂಡಿಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
SCROLL FOR NEXT