ದೇಶ

ಮಹಿಳೆಯರ ಕೊಡುಗೆ ಇಲ್ಲದೆ ಡೈರಿ, ಕೃಷಿ ವಲಯಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ; ಪ್ರಧಾನಿ ಮೋದಿ

Manjula VN
ನವದೆಹಲಿ: ಭಾರತದ ಡೈರಿ ಮತ್ತು ಕೃಷಿ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಅಘಾದವಾದದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ. 
ಮಹಿಳೆಯರ ಸ್ವಸಹಾಯ ಗುಂಪಿಗೆ ಸಂಬಂಧಿಸಿದ ಮಹಿಳೆಯರೊಂದಿಗೆ ನಮೋ ಆ್ಯಪ್ ಮೂಲಕ ವಿಡಿಯೋ ಕಾನ್ಫರೆನ್ಸ್'ನಲ್ಲಿ ಮಾತನಾಡಿರುವ ಅವರು, ಇಂದು ನೀವು ಯಾವುದೇ ಕ್ಷೇತ್ರದತ್ತ ನೋಡಿದರೂ, ಅಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿರುತ್ತದೆ. ದೇಶದ ಡೈರಿ ವಲಯ ಹಾಗೂ ಕೃಷಿ ಕ್ಷೇತ್ರಗಳನ್ನು ಮಹಿಳೆಯರಿಲ್ಲದೆ, ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮಹಿಳೆಯರನ್ನು ಕೊಂಡಾಡಿದ್ದಾರೆ. 
ದೇಶದಲ್ಲಿರುವ ಮಹಿಳಾ ಸ್ವಸಹಾಯ ಗುಂಪಿನೊಂದಿಗೆ ಕೈಜೋಡಿಸಿರುವವರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಅವರ ಅನುಭವಗಳು ಕೇಳುತ್ತಿದ್ದರೆ ಬಹಳ ಸಂತೋಷವಾಗುತ್ತಿದೆ. ಬೇರಿನಿಂದಲೇ ಧನಾತ್ಮಕ ಬದಲಾವಣೆಗಳನ್ನು ತರುತ್ತಿರುವುದನ್ನು ನೋಡುತ್ತಿದ್ದರೆ,ಸ ಬಹಳ ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.
ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿಯಲ್ಲಿ  ದೇಶಾದ್ಯಂತ  2.5 ಲಕ್ಷ ಗ್ರಾಮ ಪಂಚಾಯತ್ ಗಳಲ್ಲಿ  ಉದ್ಯೋಗ ಸೃಷ್ಟಿಸುವುದು  ಸರ್ಕಾರದ ಗುರಿಯಾಗಿದೆ ಎಂದು ನರೇಂದ್ರಮೋದಿ ಇದೇ ವೇಳೆ  ಹೇಳಿದರು.
SCROLL FOR NEXT