ದಾದಾ ಪಿ ವಾಸ್ವಾನಿ 
ದೇಶ

ಪುಣೆ: ಆಧ್ಮಾತ್ಮ ನಾಯಕ ದಾದಾ ಪಿ ವಾಸ್ವಾನಿ ನಿಧನ

ಪ್ರಖ್ಯಾತ ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ ನಿಧನರಾಗಿದ್ದಾರೆ. 99 ವರ್ಷದ ವಾಸ್ವಾನಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಪುಣೆ: ಪ್ರಖ್ಯಾತ ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ ನಿಧನರಾಗಿದ್ದಾರೆ..
99 ವರ್ಷದ ವಾಸ್ವಾನಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ನಗರದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ನಿನ್ನೆ ರಾತ್ರಿಯಷ್ಟೇ ಡಿಸ್ಟಾರ್ಜ್ ಮಾಡಲಾಗಿತ್ತು. 
ಇಂದು ಬೆಳಗ್ಗೆ ಅವರು ತಮ್ಮ ಮಿಶನ್‌ ಕೇಂದ್ರದಲ್ಲಿ ನಿಧನ ಹೊಂದಿದರು. ಮುಂದಿನ ತಿಂಗಳ ಶತಾಯುಷಿ ಆಗಲಿದ್ದ ವಾಸ್ವಾನಿ ಅವರ 100ನೇ ಹುಟ್ಟು ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಮಿಶನ್‌ ಉದ್ದೇಶಿಸಿತ್ತು. 
ವಾಸ್ವಾನಿ ಅವರು ಹುಟ್ಟಿದ್ದು ಪಾಕಿಸ್ಥಾನದ ಹೈದರಾಬಾದ್‌ ನಗರದಲ್ಲಿ ಸಿಂಧಿ ಕುಟುಂಬದಲ್ಲಿ; 1918ರ ಆಗಸ್ಟ್‌ 2ರಂದು. ದಾದಾ ವಾಸ್ವಾನಿ ಎಂದೇ ಅವರು ಪ್ರಖ್ಯಾತರಾಗಿದ್ದರು.  ಪುಣೆಯ ಸಾಧು ವಾಸ್ವಾನಿ  ಮಿಷನ್ ಮುಖ್ಯಸ್ಥರಾಗಿದ್ದರು.  ಈ ಮಿಷನ್ ಆಸ್ಪತ್ರೆ ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!