ಕಾಂಗ್ರೆಸ್ ಗೆ ಮರಳಿದ ಆಂಧ್ರಪ್ರದೇಶ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್ ಗೆ ವಾಪಸ್ಸಾಗಿದ್ದಾರೆ. ಆಂಧ್ರಪ್ರದೇಶ ವಿಭಜನೆಯ ಹಿನ್ನೆಲೆಯಲ್ಲಿ ಕಿರಣ್ ಕುಮಾರ್ ರೆಡ್ಡಿ ರಾಜೀನಾಮೆ ನೀಡಿ ಕಾಂಗ್ರೆ ಸ್ ನಿಂದ ಹೊರಬಂದಿದ್ದರು.
ಅವಿಭಜಿತ ಆಂಧ್ರದ ಕೊನೆಯ ಮುಖ್ಯಮಂತ್ರಿಯಾಗಿದ್ದ ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್ ನಿಂದ ಹೊರಬಂದ ನಂತರ ಜೈ ಸಮೈಕ್ಯ ಆಂಧ್ರ ಎಂಬ ಪಕ್ಷ ಸ್ಥಾಪಿಸಿ 2014 ರ ಲೋಕಸಭಾ ಚುನಾವಣೆ ಎದುರಿಸಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ಕಿರಣ್ ರೆಡ್ಡಿ ಕಾಂಗ್ರೆಸ್ ಗೆ ವಾಪಸ್ಸಾಗಿದ್ದು, ಕೇರಳದ ಮಾಜಿ ಸಿಎಂ ಹಾಗೂ ಆಂಧ್ರ ಕಾಂಗ್ರೆಸ್ ಉಸ್ತುವಾರಿ ಉಮ್ಮನ್ ಚಾಂಡಿ ಎಪಿಸಿಸಿ ಅಧ್ಯಕ್ಷ ಎನ್ ರಘುವೀರ ರೆಡ್ಡಿ ಹಾಗೂ ಪಕ್ಷದ ನಾಯಕ ರಣ್ದೀಪ್ ಸುರ್ಜೆವಾಲ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಿರಣ್ ರೆಡ್ಡಿ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಆಂಧ್ರದಲ್ಲಿ ಕಾಂಗ್ರೆಸ್ ಶಕ್ತಿಯನ್ನು ಹೆಚ್ಚಿಸಿದೆ ಎಂದು ಚಾಂಡಿ ಹೇಳಿದ್ದಾರೆ.