ಸಂಗ್ರಹ ಚಿತ್ರ 
ದೇಶ

ವಾಚ್‍ಮ್ಯಾನ್ ಜೊತೆಗಿನ ಸರಸ ಸಲ್ಲಾಪ ಕಂಡ ಬಾಲಕ ಹತ್ಯೆ: 8ನೇ ತರಗತಿ ವಿದ್ಯಾರ್ಥಿನಿ ಬಂಧನ

ಖಾಸಗಿ ಶಾಲೆಯ ವಸತಿಗೃಹದಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ...

ಪಾಟ್ನಾ: ಖಾಸಗಿ ಶಾಲೆಯ ವಸತಿಗೃಹದಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಪಾಟ್ನಾದ ಖಾಸಗಿ ಶಾಲೆಯೊಂದರ ವಸತಿಗೃಹದಲ್ಲಿ 8 ವರ್ಷದ ವಿದ್ಯಾರ್ಥಿನಿ ತಂಗಿದ್ದು ಅದೇ ವಸತಿಗೃಹದಲ್ಲಿ ಮೃತ 6 ವರ್ಷದ ಬಾಲಕ ಸಹ ತಂಗಿದ್ದ. ಶೌಚಾಲಯದಲ್ಲಿ ವಿದ್ಯಾರ್ಥಿನಿ ವಾಚ್‍ಮ್ಯಾನ್ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ಬಾಲಕ ಕಂಡಿದ್ದು ಈ ಹಿನ್ನೆಲೆಯಲ್ಲಿ ಆತನನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. 
ಜುಲೈ 9ರ ಬೆಳಗ್ಗೆ ಮೃತ ಅಭಿಮನ್ಯು ಮೃತದೇಹ ಆತನ ಕೋಣೆಯಲ್ಲಿ ಪತ್ತೆಯಾಗಿತ್ತು. ಜುಲೈ 6ರಂದು ವಾಚ್‍ಮ್ಯಾನ್ ವಿದ್ಯಾರ್ಥಿನಿಯನ್ನು ಶೌಚಾಲಯಕ್ಕೆ ಕರೆದುಕೊಂಡು ಸರಸ ಸಲ್ಲಾಪದಲ್ಲಿ ತೊಡಗಿದ್ದ ಇದನ್ನು ಬಾಲಕ ಕಂಡಿದ್ದು ನಂತರ 9ರಂದು ಆತ ಮೃತಪಟ್ಟಿದ್ದ. ಬಾಲಕ ಹತ್ಯೆ ನಂತರ ವಾಚ್‍ಮ್ಯಾನ್ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ

ತುಂಗಭದ್ರಾ ಜಲಾಶಯದ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಕಳಪೆ ದಾಖಲೆ ಸೃಷ್ಟಿ!

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!