ದೇಶ

ಉತ್ತರಾಖಂಡದಲ್ಲಿ ಮೇಘಸ್ಪೋಟ: ಕೊಚ್ಚಿ ಹೋದ ಮನೆ, ಅಂಗಡಿಗಳು, ವಾಹನಗಳಿಗೆ ಹಾನಿ

Shilpa D
ಡೆಹರಾಡೂನ್:  ಉತ್ತರಾಖಂಡ್ ನ ತರೈಲಿ, ಮತ್ತು ಘಾಟ್ ಪ್ರದೇಶಗಳಲ್ಲಿ ಉಂಟಾದ, ಮೇಘ ಸ್ಫೋಟಕ್ಕೆ ಸುಮಾರು 1 ಡಜನ್  ಮನೆಗಳು ಹಾಗೂ 10 ಅಂಗಡಿಗಳು ಹಾಗೂ 6 ವಾಹನಗಳು ಕೊಚ್ಚಿ ಹೋಗಿವೆ. ಆದರೆ ಯಾವುದೇ ಪ್ರಾಣಾಪಾಯವಾಗಿರುವ ವರದಿಯಾಗಿಲ್ಲ.
ಪ್ರವಾಹದಿಂದಾಗಿ 10 ಅಂಗಡಿಗಳು ಮತ್ತು ಆರು ವಾಹನಗಳು ಪನ್ಮತಿ ನದಿಯಲ್ಲಿ ಕೊಚ್ಚಿಹೋಗಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ  ಅಧಿಕಾರಿ ತಿಳಿಸಿದ್ದಾರೆ.
ಅಧಿಕ ಮಳೆಯಿಂದಾಗಿ ಧುರ್ಮಾ ಮತ್ತು ಕುಂಡಿ ಗ್ರಾಮದಲ್ಲಿ  ಭೂ ಕುಸಿತ ಉಂಟಾಗಿದೆ ಪರಿಹಾರ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕಾಗಮಿಸಿವೆ, ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್  ಆಶೀಶ್ ಜೋಶಿ ಹೇಳಿದ್ದಾರೆ.
ಮಳೆಯಿಂದಾಗಿ ಬದರಿನಾಥ್, ಹೆದ್ದಾರಿ  ರಸ್ತೆ ಕ್ಲೋಸ್ ಮಾಡಲಾಗಿತ್ತು, ನಂತರ ಜೆಸಿಬಿ ಬಂದು ರಸ್ತೆ ತೆರವು ಗೊಳಿಸಿದ ಮೇಲೆ ಸಂಚಾರ ಪುನಾರಂಭವಾಯಿತು. 
SCROLL FOR NEXT