ದೇಶ

ಎನ್ಐಎ, ಯುಎಪಿಎ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರದ ಚಿಂತನೆ

Srinivas Rao BV
ನವದೆಹಲಿ: ರಾಷ್ಟ್ರೀಯ ತನಿಖಾ ದಳವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಎನ್ಐಎ, ಯುಎಪಿಎ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಚಿಂತನೆ ನಡೆಸಿದೆ. 
ಮುಂಗಾರು ಅಧಿವೇಶನದಲ್ಲಿ ಎನ್ಐಎ ಹಾಗೂ ಭಯೋತ್ಪಾದನೆ ಪ್ರತಿಬಂಧಕ ಕಾನೂನು (ಯುಎಪಿಎ) ಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 
ತಿದ್ದುಪಡಿ ಕಾಯ್ದೆಯ ಮೂಲಕ ಹೊರ ದೇಶದಲ್ಲಿರುವ ಭಾರತೀಯರ ಮೇಲೆ ಭಯೋತ್ಪಾದಕ ದಾಳಿ ನಡೆದರೆ ಅದನ್ನೂ ತನಿಖೆ ನಡೆಸುವ ಅಧಿಕಾರ ಎನ್ಐಎ ಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ನೋಡಲ್ ಪ್ರಾಧಿಕಾರವನ್ನಾಗಿಯೂ ಎನ್ಐಎಯನ್ನು ಬಳಕೆ ಮಾಡಿಕೊಳ್ಳಲು ಈ ತಿದ್ದುಪಡಿ ಕಾಯ್ದೆಯ ಮೂಲಕ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಮಿಷನ್ಗಳ ಮೇಲೆ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್ಐಎ ಗೆ ಹೊರ ದೇಶಗಳಲ್ಲಿರುವ ಭಾರತೀಯರ ಮೇಲೆ ಭಯೋತ್ಪಾದಕ ದಾಳಿ ನಡೆದರೆ ಆ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನು ನೀಡಲು ಮುಂಗಾರು ಅಧಿವೇಶನದಲ್ಲಿ ತೀರ್ಮಾನಿಸಲಾಗಿದೆ.
SCROLL FOR NEXT