ದೇಶ

ಇರಾನ್ ನಿಂದ ತೈಲ ಖರೀದಿಸಬೇಕೋ ಅಥವಾ ಅಮೆರಿಕದಿಂದಲೋ?: ಗೊಂದಲದಲ್ಲಿ ಮೋದಿ ಸರ್ಕಾರ

Srinivas Rao BV
ನವದೆಹಲಿ: ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳದಂತೆ ಅಮೆರಿಕ ಭಾರತಕ್ಕೆ ಒತ್ತಡ ಹೇರಿದ್ದು, ಆ ಒತ್ತಡದ ನಂತರ ಭಾರತ ಇರಾನ್ ನಿಂದ ಆಮದು ಮಾಡಿಕೊಳ್ಳುತ್ತಿದ್ದ ತೈಲ ಪ್ರಮಾಣ ಕಡಿಮೆಯಾಗಿದ್ದು ಎಲ್ಲವೂ ಗೊತ್ತೇ ಇದೆ. ಆದರೆ ಮುಂದಿನ ದಿನಗಳಲ್ಲಿ ಇರಾನ್ ವಿರುದ್ಧ ಅಮೆರಿಕ ನಿರ್ಬಂಧ ಹೇರಿದರೆ ಭಾರತದ ನಡೆ ಏನಾಗಿರಲಿದೆ ಎಂಬ ಕುತೂಹಲ ಮೂಡಿದೆ. 
ಜನಸಾಮಾನ್ಯರಿಗೆ ಈ ಬಗ್ಗೆ ಕುತೂಹಲವಿದ್ದರೆ, ನಿರ್ಧಾರ ಕೈಗೊಳ್ಳಬೇಕಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇರಾನ್ ನಿಂದ ತೈಲ ಖರೀದಿಸಬೇಕೋ ಅಥವಾ ಅಮೆರಿಕದಿಂದಲೋ ಎಂಬ ಗೊಂದಲ ಮೂಡಿದೆ. 
ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಾಣಿಜ್ಯ ಸಂಪರ್ಕ ಸಾಧಿಸಲು ಚಬಹಾರ್ ಬಂದರು ಭಾರತಕ್ಕೆ ಅನಿರ್ವಾರ್ಯವಾಗಿದ್ದು, ಈ ದೃಷ್ಟಿಯಿಂದ ಇರಾನ್ ನೊಂದಿಗಿನ ಸಂಬಂಧವನ್ನು ಭಾರತ ಹದಗೆಡಿಸಿಕೊಳ್ಳುವುದಕ್ಕೆ ಸಿದ್ಧವಿಲ್ಲ. ತೈಲ ಆಮದು ಪ್ರಮಾಣ ಕುಸಿತವಾಗುತ್ತಿದ್ದಂತೆಯೇ ಚಬಹಾರ್ ಬಂದರು ಹೂಡಿಕೆಯನ್ನು ಪ್ರಸ್ತಾಪಿಸಿದ್ದ ಇರಾನ್  ಭಾರತಕ್ಕೆ ನೀಡುತ್ತಿದ್ದ ವಿಶೇಷ ಸೌಲಭ್ಯಗಳನ್ನು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೆ ಇರಾನ್ ಮೇಲೆ ಹೊಸದಾಗಿ ನಿರ್ಬಂಧ ಹೇರುವ ಸಾಧ್ಯತೆಗಳೂ ಇದ್ದು, ಅಮೆರಿಕಾದಿಂದ ತೈಲ ಆಮದು ಮಾಡಿಕೊಂಡರೆ ಇರಾನ್ ನಿಂದ ಸಿಗುವಂತೆ ಕ್ರೆಡಿಟ್ ಲೇನ್ ಮುಂತಾದ ಸೌಲಭ್ಯಗಳು ಸಿಗುವುದಿಲ್ಲ. ಒಂದು ವೇಳೆ ಇರಾನ್ ಮೇಲೆ ನಿರ್ಬಂಧ ವಿಧಿಸಿದ್ದೇ ಆದಲ್ಲಿ ಅಮೆರಿಕಾ ತೈಲಕ್ಕೆ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ವಾಣಿಜ್ಯೀಕರಣವಾಗುವ ಸಾಧ್ಯತೆ ಇದ್ದು,  ಇರಾನ್ ನಿಂದ ತೈಲ ಖರೀದಿಸಬೇಕೋ ಅಥವಾ ಅಮೆರಿಕದಿಂದಲೋ? ಎಂಬ ಗೊಂದಲದಲ್ಲಿ ಮೋದಿ ಸರ್ಕಾರ ಸಿಲುಕಿದೆ. 
SCROLL FOR NEXT