ದೇಶ

ರಾಜ್ಯಸಭೆಯ ಸದಸ್ಯರು ದೇಶದ 22 ಭಾಷೆಗಳಲ್ಲೂ ಮಾತನಾಡಬಹುದು

Nagaraja AB

ನವದೆಹಲಿ: ರಾಜ್ಯಸಭೆಯ ಸದಸ್ಯರು  ದೇಶದ 22 ಭಾಷೆಗಳಲ್ಲೂ  ಮಾತನಾಡಬಹುದು ಎಂದು ಮೇಲ್ಮನೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರಿಂದು ಪ್ರಕಟಿಸಿದರು.

 ಡೊಂಗ್ರಿ, ಕಾಶ್ಮಿರಿ, ಕೊಂಕಣಿ, ಸಂತಾಲಿ, ಮತ್ತು ಸಿಂಧಿಯಲ್ಲೂ ವಿಚಾರ ಮಂಡಿಸಬಹುದು ಎಂದು ಮುಂಗಾರು ಅಧಿವೇಶನ ಆರಂಭದ ದಿನವಾದ ಇಂದು ವೆಂಕಯ್ಯನಾಯ್ಡು ರಾಜ್ಯಸಭೆಯಲ್ಲಿ ತಿಳಿಸಿದರು.

ಈ ಮೊದಲು ರಾಜ್ಯಸಭೆಯಲ್ಲಿ ಅಸ್ಸಾಮೀ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ,  ಒರಿಯಾ, ಪಂಜಾಬಿ, ತಮಿಳು , ತೆಲುಗು , ಉರ್ದು ಸೇರಿದಂತೆ 17 ಭಾಷೆಗಳಲ್ಲಿ ಮಾತನಾಡಬಹುದು. ಈಗ  ಹೆಚ್ಚುವರಿಯಾಗಿ 5 ಭಾಷೆಗಳಲ್ಲೂ ಮಾತನಾಡಬಹುದಾಗಿದೆ .

 ಆದಾಗ್ಯೂ , ಸದಸ್ಯರು ಮಾತನಾಡುವ ಭಾಷೆ ಬಗ್ಗೆ ಸಚಿವಾಲಯದ ಗಮನಕ್ಕೆ ತರಬೇಕಾಗುತ್ತದೆ.ಆರಂಭದಲ್ಲಿ ಭಾಷಾಂತರಕ್ಕೆ ತೊಡಕಾಗಬಹುದು, ಆದರೂ, ಎಲ್ಲಾ ಸದಸ್ಯರು ತಮ್ಮ ಭಾಷೆಗಳಲ್ಲಿಯೇ ಸಲಹೆ ನೀಡಬಹುದು ಎಂದು ವೆಂಕಯ್ಯನಾಯ್ಡು ಹೇಳಿದರು.

ಇದನ್ನು ಶ್ಲಾಘಿಸಿದ ಬಿಜೆಪಿ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ, ಸಂಸ್ಕೃತ ಸೇರಿಸುವ ಪ್ರಯತ್ನ ಮಾಡುವಂತೆ ಹೇಳಿದರು.

 ಸ್ವಾತಂತ್ಯ ಬಂದ 66  ವರ್ಷಗಳಲ್ಲಿ ಇದೇ ಮೊದಲ ಬಾರಿಗೆ   ರಾಜ್ಯಸಭೆಯು ವಿದೇಶಿ ರಾಷ್ಟ್ರದ ಸಂಸದೀಯ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ತಿಂಗಳ ಆರಂಭದಲ್ಲಿ  ರವಾಂಡಾ ಸೆನೆಟ್ ನಲ್ಲಿ ಇದು ಪ್ರಾರಂಭವಾಗಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.

ಸಂಸದೀಯ ಸಂಭಾಷಣೆ ಮತ್ತು ಇತರರ ಸಂಸದೀಯ ವಿನಿಮಯದ ಭೇಟಿಗಳಿಗೆ  ಒಪ್ಪಂದವು ನೆರವು ಒದಗಿಸುತ್ತದೆ. ಈವರೆಗೆ, ಲೋಕಸಭೆಯು ಕೇವಲ ವಿದೇಶಿ ಸಂಸದೀಯ ಸಂಸ್ಥೆಗಳೊಂದಿಗೆ  ಒಪ್ಪಂದ ಮಾಡಿಕೊಳ್ಳುತಿತ್ತು.

SCROLL FOR NEXT