ದೇಶ

ಕೋಮಾದಲ್ಲಿದ್ದ ತಾಯಿಗೆ ಮರುಜೀವ ಕೊಟ್ಟ ನವಜಾತ ಶಿಶು!

Vishwanath S
ತಿರುವನಂತಪುರ: ಕೋಮಾಗೆ ಜಾರಿದ್ದ ತಾಯಿ ಮಗು ಹುಟ್ಟಿದ ಕೂಡಲೇ ಕೋಮಾ ಸ್ಥಿತಿಯಿಂದ ಹೊರಬಂದಿರುವ ಅಪರೂಪದ ಘಟನೆ ಕೇರಳದ ಪೇರೂರಿನಲ್ಲಿ ನಡೆದಿದೆ. 
2018ರ ಜನವರಿಯಲ್ಲಿ ಬೆಟಿನಾ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿಗೆ ಗಾಯವಾಗಿದ್ದರಿಂದ ಅವರು ಪಾರ್ಶ್ವವಾಯುವಿಗೆ ಒಳಗಾಗಿ ಕೋಮಾಗೆ ಜಾರಿದ್ದರು. ಈ ಮಧ್ಯೆ ಆಕೆ ಮೂರು ತಿಂಗಳ ಗರ್ಭಿಣಿಯಾಗಿರುವುದನ್ನು ಕಂಡ ವೈದ್ಯರು ಗೊಂದಲಕ್ಕೀಡಾಗಿದ್ದರು. ತಾಯಿಯ ಜೀವವನ್ನು ಉಳಿಸುತ್ತಿರುವ ಮಾತ್ರೆಗಳ ಸೈಡ್ ಎಫೆಕ್ಟ್ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ತೊಂದರೆಯಾಗಬಹುದೆಂದು ವೈದ್ಯರು ಆತಂಕಕೊಂಡಿದ್ದರು. 
ತೀವ್ರ ಹಾರೈಕೆಯ ನಂತರ ವೈದ್ಯರು ಜೂನ್ 14ರಂದು ಆಪರೇಷನ್ ಮೂಲಕ ಮಗುವನ್ನು ಹೊರತೆಗೆದರು. ಇನ್ನು ಅಚ್ಚರಿ ಎಂಬಂತೆ ಮಗು ಹುಟ್ಟಿದ ಕೂಡಲೇ ಬೆಟಿನಾ ಕೋಮಾ ಸ್ಥಿತಿಯಿಂದ ಗುಣಮುಖರಾಗಿದ್ದು ತನ್ನ ಮಗುವನ್ನು ನೋಡಿ ಸಂತೋಷಪಟ್ಟಿದ್ದಾರೆ. 
ಸದ್ಯ ಮಗು ಹಾಗೂ ತಾಯಿ ಆರೋಗ್ಯದಿಂದಿದ್ದು 10 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
SCROLL FOR NEXT