ದೇಶ

7 ತಿಂಗಳ ಮಗು ಮೇಲೆ ಅತ್ಯಾಚಾರ, 19 ವರ್ಷದ ಬಾಲಕನಿಗೆ ಗಲ್ಲು ಶಿಕ್ಷೆ: ಪೋಸ್ಕೋ ಕಾಯ್ದೆ ತಿದ್ದುಪಡಿ ನಂತರದ ಮೊದಲ ಶಿಕ್ಷೆ!

Srinivas Rao BV
ಜೈಪುರ: 7 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ 19 ವರ್ಷದ ಬಾಲಕನಿಗೆ ರಾಜಸ್ಥಾನದ ಅಲ್ವಾರ್ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. 
12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರವೆಸಗುವ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತಂದ ನಂತರ ನಡೆದಿರುವ ಮೊದಲ ಪ್ರಕರಣ ಇದಾಗಿದ್ದು, ಅಪರಾಧಿಗೆ ಮರಣ ದಂಡನೆ ವಿಧಿಸಲಾಗಿದೆ. ಎಸ್ ಸಿ/ಎಸ್ ಟಿ ಕಾಯ್ದೆ ಹಾಗೂ ಪೋಸ್ಕೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. 
ಮೇ.09 ರಂದು ಅಲ್ವಾರ್ ನ ಲಕ್ಷ್ಮಣ್ ಘರ್ ಪ್ರದೇಶದಲ್ಲಿ 7 ತಿಂಗಳ ಮಗುವಿನ ಮೇಲೆ 19 ವರ್ಷದ ಹುಡುಗ ಪಿಂಟು ಅತ್ಯಾಚಾರವೆಸಗಿದ್ದು ಸಾಬೀತಾಗಿದ್ದು, ಐಪಿಸಿ ಸೆಕ್ಷನ್ 363, 366 ರ ಅಡಿಯಲ್ಲಿ ಹಾಗೂ 376 ಎಬಿ ಅಡಿಯಲ್ಲಿ ಮರಣ ದಂಡನೆಯನ್ನು ವಿಧಿಸಲಾಗಿದೆ. 
12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರವೆಸಗುವ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನನ್ನು 2018 ರ ಏಪ್ರಿಲ್ 21 ರಂದು ಜಾರಿಗೆ ತರಲಾಗಿತ್ತು. 
SCROLL FOR NEXT