ದೇಶ

ಭಾಷಣದ ವೇಳೆ 'ಜುಮ್ಲಾ' ಪದ ಬಳಿಸಿದ ರಾಹುಲ್: ಅರ್ಥ ತಿಳಿಯಲು ಗೂಗಲ್ ಮೊರೆ ಹೋದ ಜನತೆ

Manjula VN
ನವದೆಹಲಿ: ಅವಿಶ್ವಾಸ ನಿರ್ಣಯದ ಪರ ಮಾತನಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಆಡಳಿತಾರೂಢ ಎನ್'ಡಿಎ ಪಕ್ಷದ ವಿರುದ್ಧ ಬಳಸಿದ ಜುಮ್ಲಾ ಪದದ ಅರ್ಥ ತಿಳಿಯಲು ಜನರು ಗೂಗಲ್ ಮೊರೆ ಹೋಗಿದ್ದು, ಗೂಗಲ್ ಶೋಧದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿತ್ತು ಎಂಬುದಾಗಿ ತಿಳಿದುಬಂದಿದೆ. 
ಶುಕ್ರವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್, ನಾವೆಲ್ಲಾ ಈ ಸರ್ಕಾರದ ಜುಮ್ಲಾ ದಾಳಿಯ ಬಲಿಪಶುಗಳು ಎಂದು ಹೇಳಿದ್ದರು. 
ರಾಹುಲ್ ಅವರು ಜುಮ್ಲಾ ಪದ ಬಳಕೆ ಮಾಡುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ. ದಕ್ಷಿಣದ ರಾಜ್ಯಗಳ ನೆಟ್ಟಿಗರು, ಜುಮ್ಲಾ ಪದ ಅರ್ಥಕ್ಕಾಗಿ ಗೂಗಲ್ ನಲ್ಲಿ ಭಾರೀ ಹುಡುಕಾಟ ನಡೆಸತೊಡಗಿದ್ದರು. 
ರಾಹುಲ್ ಈ ಪದ ಬಳಿಸಿದ ಕೆಲ ಹೊತ್ತಿನ ಬಳಿಕ ದಕ್ಷಿಣ ರಾಜ್ಯಗಳಲ್ಲಿ ಇಂಟರ್ನೆಟ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ಪದವಾಗಿ ಜುಮ್ಲಾ ಹೊರಹೊಮ್ಮಿತ್ತು. ಅದರಲ್ಲೂ ಕರ್ನಾಟಕ ಇಂತಹ ಹುಡುಕಾಟದಲ್ಲಿ ನಂ.1 ಸ್ಥಾನದಲ್ಲಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಪದ ಕುರಿತಂತೆ ಚರ್ಚೆಗಳು ಆರಂಭವಾಗಿದ್ದವು. 
SCROLL FOR NEXT