ದೇಶ

ಭಾರತದಂತೆಯೇ ಬ್ರಿಟನ್ ಗೂ ಬುಲೆಟ್ ರೈಲಿನ ಕನಸು, ಜನರಿಂದ ವಿರೋಧ!

Srinivas Rao BV
ಲಂಡನ್: ಭಾರತದಂತೆಯೇ ಬ್ರಿಟನ್ ಸಹ ಬುಲೆಟ್ ರೈಲಿನ ಕನಸು ಹೊಂದಿದೆ. ಆದರೆ ಜನರಿಂದ ಮಾತ್ರ ಬುಲೆಟ್ ರೈಲಿಗೆ ವಿರೋಧ ವ್ಯಕ್ತವಾಗುತ್ತಿದೆ. 
ಜಪಾನ್ ಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಬ್ರಿಟನ್ ಬುಲೆಟ್ ರೈಲಿನ ಮೊದಲ ಹಂತವನ್ನು 2026 ರ ವೇಳೆಗೆ ಲೋಕಾರ್ಪಣೆಗೊಳಿಸಬೇಕೆಂಬ ಯೋಜನೆ ಹೊಂದಿದೆ. ಹೈಸ್ಪೀಡ್ 2 ನೆಟ್ವರ್ಕ್ ರೈಲಿಗೆ ಬ್ರಿಟನ್ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಮೊದಲ ಹಂತದಲ್ಲಿ ಲಂಡನ್ ನಿಂದ ಬರ್ಮಿಂಗ್ಹ್ಯಾಮ್  ಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ಇನ್ನು ಎರಡನೇ ಹಂತದ ಬುಲೆಟ್ ರೈಲು ಯೋಜನೆಯಡಿಯಲ್ಲಿ   ಮ್ಯಾಂಚೆಸ್ಟರ್ -ಷೆಫೀಲ್ಡ್ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. 
ಬುಲೆಟ್ ರೈಲಿನಿಂದ ಒಂದಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ, ಸುಮಾರು 56 ಬಿಲಿಯನ್ ಪೌಂಡ್ಸ್ ಅಂದಾಜು ವೆಚ್ಚದಲ್ಲಿ ಯೋಜನೆ ನಿರ್ಮಾಣ ಮಾಡುವುದಕ್ಕೆ ಒಂದಷ್ಟು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 
ಬ್ರಿಟನ್ ನ ಹೆಚ್ಚಿನ ಜನತೆ ವಿಮಾನದ ಮೂಲಕ ಹೆಚ್ಚು ಪ್ರಯಾಣ ಮಾಡುತ್ತಿರುವಾಗ ಬ್ರಿಟನ್ ರೈಲಿನ ಅಗತ್ಯವೇನು ಎಂದು ಜನತೆ ಪ್ರಶ್ನಿಸುತ್ತಿದ್ದು, ಬುಲೆಟ್ ರೈಲಿನಿಂದ ಆಗುವ ಉಪಯೋಗಕ್ಕಿಂತ ಹೊರೆಯೇ ಜಾಸ್ತಿಯಾಗಿದ್ದು, "ಬಿಳಿ ಆನೆ" ಯೋಜನೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿರುವುದನ್ನು ಅಲ್ಲಿನ ಪತ್ರಿಕೆಗಳು ವರದಿ ಪ್ರಕಟಿಸಿವೆ.
SCROLL FOR NEXT