ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸಂಸತ್ ನಲ್ಲಿ ಕಣ್ಣು ಹೊಡೆದ ರಾಹುಲ್ ಗಾಂಧಿಯನ್ನು ಲೋಫರ್ ಎಂದು ಕರೆದ ಗೋವಾ ಬಿಜೆಪಿ!

ಸಂಸತ್ ನಲ್ಲಿ ಕಣ್ಣು ಹೊಡೆದಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೊಳಗಾಗುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗೋವಾ ಬಿಜೆಪಿ ವಕ್ತಾರ "ಲೋಫರ್" ಎಂದು ಕರೆಯುವ ಮೂಲಕ ವಿವಾದ

ಸಂಸತ್ ನಲ್ಲಿ ಕಣ್ಣು ಹೊಡೆದ ರಾಹುಲ್ ಗಾಂಧಿಯನ್ನು ಲೋಫರ್ ಎಂದು ಕರೆದ ಗೋವಾ ಬಿಜೆಪಿ!
Srinivas Rao BV
Updated On : 23 Jul 2018, 9:33 am
ಪಣಜಿ: ಸಂಸತ್ ನಲ್ಲಿ ಕಣ್ಣು ಹೊಡೆದಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೊಳಗಾಗುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗೋವಾ ಬಿಜೆಪಿ ವಕ್ತಾರ "ಲೋಫರ್" ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 
ಗೋವಾ ಕಾಂಗ್ರೆಸ್ ಮುಖ್ಯಸ್ಥ ಗೋವಾ ಮುಖ್ಯಮಂತ್ರಿಯನ್ನು ಎನ್ ಡಿಎ ಮೈತ್ರಿಕೂಟದ ಕೈಗೊಂಬೆ ಎಂದು ಕರೆದಿದ್ದ ಬೆನ್ನಲ್ಲೇ ಗೋವಾ ಬಿಜೆಪಿ ವಕ್ತಾರರು ರಾಹುಲ್ ಗಾಂಧಿಯನ್ನು ಸಂಸತ್ ನಲ್ಲಿ ಕಣ್ಣು ಹೊಡಿದಿದ್ದಕ್ಕಾಗಿ ಲೋಫರ್ ಎಂದು ಕರೆದಿದ್ದಾರೆ. ಭಾರತದ ಜನತೆಗೆ ಸಂಬಂಧಿಸಿದ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ರಾಹುಲ್ ಗಾಂಧಿ ಲೋಫರ್ ರೀತಿಯಲ್ಲಿ, ಪ್ರಜಾಪ್ರಭುತ್ವದ ದೇವಾಲಯವಾಗಿರುವ ಸಂಸತ್ ನಲ್ಲಿ ಪ್ರಧಾನಿಯನ್ನು ಅಪ್ಪಿಕೊಂಡಿದ್ದೂ ಅಲ್ಲದೇ ಕಣ್ಣು ಹೊಡೆದಿದ್ದಾರೆ ಎಂದು ಬಿಜೆಪಿ ವಕ್ತಾರ ದತ್ತಪ್ರಸಾದ್ ನಾಯ್ಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. 
ಕಾಲೇಜು ಹುಡುಗಿಯರತ್ತ ಕಣ್ಣು ಹೊಡೆಯುವ ಲೋಫರ್ ಗಳ ಬಗ್ಗೆಯಷ್ಟೇ ನಾವು ಕೇಳಿದ್ದೆವು, ಆದರೆ ಇಂತಹದ್ದೇ ಘಟನೆ ಪ್ರಜಾಪ್ರಭುತ್ವದ ದೇವಾಲಯದಂತಿರುವ ಸಂಸತ್ ನಲ್ಲಿಯೂ ನಡೆಯಿತು, ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೂ ಸಹ ಗಾಂಧಿ ವಂಶದ ಕೈಗೊಂಬೆಯಾಗಿದ್ದಾರೆ ಎಂದು ದತ್ತಪ್ರಸಾದ್ ನಾಯ್ಕ್ ಹೇಳಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement