ವಿಜಯವಾಡದಲ್ಲಿ ಪುಸ್ತಕ ಬಿಡುಗಡೆ ನಂತರ ವೆಬ್ ಸೈಟ್ ಉದ್ಘಾಟನೆ 
ದೇಶ

ದೇಶ ವಿರೋಧಿ ಎಂದು ಕರೆದರೂ ಚಿಂತೆಯಿಲ್ಲ, ಮೌನ ಬೇಡ, ಧ್ವನಿ ಎತ್ತಿ ಮಾತಾಡಿ: ಜಸ್ಟೀಸ್ ಚೆಲಮೇಶ್ವರ್

ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಂಡಾಯದ ಮುಂಚೂಣಿ ವಹಿಸಿ ಸುದ್ದಿಯಾಗಿದ್ದ...

ವಿಜಯವಾಡ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಂಡಾಯದ ಮುಂಚೂಣಿ ವಹಿಸಿ ಸುದ್ದಿಯಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಚೆಲಮೇಶ್ವರ್ ಇದೀಗ ಮತ್ತೊಂದು ಸೂಕ್ಷ್ಮ ಹೇಳಿಕೆ ನೀಡಿದ್ದಾರೆ.

ಜನರು ಸರ್ಕಾರದ ವಿರುದ್ಧ ಮಾತನಾಡಿ ದೇಶ ವಿರೋಧಿ ಎಂಬ ಹಣೆಪಟ್ಟೆ ಸಿಕ್ಕಿದರೆ ಅದಕ್ಕೆ ಭಯಪಡುವ ಅಗತ್ಯವಿಲ್ಲ ಮತ್ತು ಕ್ಷಮೆ ಕೇಳುವ ಅವಶ್ಯಕತೆ ಕೂಡ ಇಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಮ್ಮ ಧ್ವನಿಯನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ಭಯ ಮತ್ತು ಪೂರ್ವ ಗ್ರಹಿಕೆಯಿಂದ ನಮ್ಮ ಭಾವನೆಗಳನ್ನು ವ್ಯಕ್ತಪಡಿಸದಿದ್ದರೆ ಅದು ಪ್ರಜಾಪ್ರಭುತ್ವದ ಸ್ಪೂರ್ತಿಗೆ ಧಕ್ಕೆ ತಂದಂತಾಗುತ್ತದೆ ಎಂದು ಹೇಳಿದ್ದಾರೆ.

ವಿಜಯವಾಡದಲ್ಲಿ ಅವರು ಮಾಜಿ ಸಚಿವ ವಡ್ಡೆ ಶೋಭನಾದ್ರೀಶ್ವರ ರಾವ್ ಅವರು ಬರೆದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, 1960-70ರ ದಶಕದಲ್ಲಿ ಸರ್ಕಾರವನ್ನು ಟೀಕಿಸುತ್ತಿರುವವರನ್ನು ಕೇಂದ್ರ ಗುಪ್ತಚರ ವಿಭಾಗ(ಸಿಐಎ) ಏಜೆಂಟರೆಂದು ಕರೆಯುತ್ತಿದ್ದರು. 1990ರ ದಶಕದಲ್ಲಿ ಜಾಗತೀಕರಣ ಬಂದ ನಂತರ ಸರ್ಕಾರವನ್ನು ಟೀಕಿಸುವವರನ್ನು, ಯೋಜನೆಗಳ ವಿರುದ್ಧ ಮಾತನಾಡುವವರನ್ನು ಸಿಐಎ ಏಜೆಂಟ್ ಗಳೆಂದು ಕರೆಯುವುದಿಲ್ಲ. ಇಂದಿನ ದಿನಗಳಲ್ಲಿ ಸರ್ಕಾರವನ್ನು ಟೀಕಿಸುವವರನ್ನು ದೇಶ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ ಎಂದರು.

ಈ ಅಭ್ಯಾಸ ಕೇವಲ ನಮ್ಮ ದೇಶಕ್ಕೆ ಸೀಮಿತವಾಗಿಲ್ಲ, ಇಡೀ ವಿಶ್ವದಲ್ಲಿ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಭಾರತದಲ್ಲಾಗಲಿ ಅಥವಾ ಬೇರೆ ದೇಶಗಳಲ್ಲಾಗಲಿ ಈ ವಿಷಯದಲ್ಲಿ ಒಂದೇ ರೀತಿ ಇವೆ. ಅವರ ದೃಷ್ಟಿಕೋನ ಪ್ರಕಾರ  ತಾವು ಹೇಳುವುದು ಸರಿ ಎಂಬ ಭಾವನೆ ಅವರದ್ದು. ಆಡಳಿತ ನಡೆಸುವ ರಾಜಕೀಯ ಪಕ್ಷಗಳ ಅಭಿಪ್ರಾಯಗಳಿಗೆ ವಿರುದ್ಧವಾಗಿ ಜನರ ಭಾವನೆಗಳಿದ್ದರೆ ಅಂತವರನ್ನು ದೇಶ ವಿರೋಧಿಗಳೆಂದು ಬಿಂಬಿಸಿ ಅವರ ಮೇಲೆ ದಾಳಿಗಳು ನಡೆಯುತ್ತವೆ ಎಂದು ಹೇಳಿದರು.

ಹಬೆ ಸ್ನಾನ ಮತ್ತು ಅಗತ್ಯವಿರುವಲ್ಲಿ ಮಾತನಾಡದಿರುವುದನ್ನು ಒಂದಕ್ಕೊಂದು ಸಾಮ್ಯತೆ ಮಾಡಿ ಮಾತನಾಡಿದ ಚೆಲಮೇಶ್ವರ್, ಹಬೆ ಸ್ನಾನದಲ್ಲಿ ನಾವು ಬಹಳ ಹೊತ್ತಿನವರೆಗೆ ಕುಳಿತರೆ, ನಮ್ಮ ಚರ್ಮ ಬಿಸಿಗೆ ಯಾವಾಗ ಸುಟ್ಟುಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ಅಗತ್ಯವಿರುವಲ್ಲಿ ನಾವು ಮಾತನಾಡದಿದ್ದರೆ ಕೂಡ ಹಾಗೆಯೇ. ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದು ಮಾತನಾಡದವರು ಕೊನೆಗೆ ಅದರಿಂದ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಸಾರ್ವಜನಿಕ ವಿಷಯಗಳ ಕುರಿತು ಜನರು ಯಾವುದೇ ಭಯವಿಲ್ಲದೆ ಅಭಿಪ್ರಾಯ ಮಂಡಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT