ಆಳ್ವಾರ್ ಸಾಮೂಹಿಕ ಹಲ್ಲೆ: ಆಘಾತ, ಗಂಭೀರ ಗಾಯಗಳಿಂದ ಸಂತ್ರಸ್ತನ ಸಾವು; ಮರಣೋತ್ತರ ವರದಿ 
ದೇಶ

ಆಳ್ವಾರ್ ಸಾಮೂಹಿಕ ಹಲ್ಲೆ: ಆಘಾತ, ಗಂಭೀರ ಗಾಯಗಳಿಂದ ಸಂತ್ರಸ್ತನ ಸಾವು; ಮರಣೋತ್ತರ ವರದಿ

ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣದ ಸಂತ್ರಸ್ತ ವ್ಯಕ್ತಿ ಆಘಾತ ಹಾಗೂ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾನೆಂದು ಮರಣೋತ್ತರ ವರದಿಗಳಿಂದ ಮಂಗಳವಾರ ತಿಳಿದುಬಂದಿದೆ...

ಜೈಪುರ: ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣದ ಸಂತ್ರಸ್ತ ವ್ಯಕ್ತಿ ಆಘಾತ ಹಾಗೂ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾನೆಂದು ಮರಣೋತ್ತರ ವರದಿಗಳಿಂದ ಮಂಗಳವಾರ ತಿಳಿದುಬಂದಿದೆ. 
ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ ಕಲೆದ ಶನಿವಾರ ರಕ್ಬರ್ ಖಾನ್ ಎಂಬ 28 ವರ್ಷದ ವಯಸ್ಸಿನ ಯುವಕನ ಮೇಲೆ ಸಾಮೂಹಿಕ ಹಲ್ಲೆ ನಡೆದಿತ್ತು. 
ಹಲ್ಲೆಗೊಳಗಾಗಿದ್ದ ವ್ಯಕ್ತಿ ರಕ್ಭರ್ ಖಾನ್ ಅವರು ಆಘಾತ ಹಾಗೂ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆಂದು ಮರಣೋತ್ತರ ವರದಿಗಳಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜಸ್ಥಾನ ಡಿಜಿಪಿ ಒಪಿ.ಗಲ್ಹೋತ್ರಾ ಅವರು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. 
ಪರಿಸ್ಥಿತಿ ಹಾಗೂ ಪ್ರಕರಣಗಳಿಗೆ ಆದ್ಯತೆ ನೀಡುವಲ್ಲಿ ಕೆಲ ದೋಷಗಳಾಗಿವೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ವಿಶೇಷ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎನ್.ಆರ್.ಕೆ. ರೆಡ್ಡಿಯವರು ಹೇಳಿದ್ದಾರೆ. 
ಇದಲ್ಲದೆ ಪ್ರಕರಣದಲ್ಲಿ ರಾಜಕೀಯ ಗಣ್ಯ ವ್ಯಕ್ತಿಯೊಬ್ಬರ ಹೆಸರೂ ಕೂಡ ಕೇಳಿ ಬಂದಿದೆ. ಹಲ್ಲೆ ವೇಳೆ ದಾಳಿಕೋರರು ಬಿಜೆಪಿ ಶಾಸಕರೊಬ್ಬರ ಕುರಿತಂತೆ ಮಾತನಾಡುತ್ತಿದ್ದರು, ಬಿಜೆಪಿ ಶಾಸಕ ನಮ್ಮೊಂದಿಗಿದ್ದು, ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸಾಕ್ಷ್ಯ ನುಡಿದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT