ದೇಶ

2019 ಲೋಕಸಭಾ ಚುನಾವಣೆ ಎದುರಿಸಲಿರುವ ಈ ಪಕ್ಷಕ್ಕೆ ಅಧಿಕೃತ ಫೇಸ್ ಬುಕ್, ಟ್ವಿಟರ್ ಖಾತೆಗಳೇ ಇಲ್ಲ!

Srinivas Rao BV
2014 ರ ಲೋಕಸಭಾ ಚುನಾವಣೆಯಿಂದ ರಾಜಕೀಯ ಪಕ್ಷಗಳಿಗೆ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ್ದ ಬಹುಜನ ಸಮಾಜವಾದಿ ಪಕ್ಷ ಯಾವುದೇ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯನ್ನೂ ಹೊಂದಿಲ್ಲ. 
ಸ್ವತಃ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಕೇವಲ ಸಾಮಾಜಿಕ ಜಾಲತಾಣದ ಖಾತೆಯಷ್ಟೇ ಅಲ್ಲ, ಗೂಗಲ್ ನಲ್ಲಿ ಹುಡುಕಿದರೆ ನಮ್ಮ ಪಕ್ಷದ ವೆಬ್ ಸೈಟ್ ಕೂಡಾ ಸಿಗುವುದಿಲ್ಲ ಎಂದು ಮಾಯಾವತಿಯೇ ಹೇಳಿದ್ದಾರೆ. 
ದೇವಾಶಿಶ್ ಜರಾರಿಯಾ ಎಂಬ ವ್ಯಕ್ತಿ ಬಿಎಸ್ ಪಿ ಯೂತ್ ಎಂಬ ಹೆಸರಿನಲ್ಲಿ ಬಿಎಸ್ ಪಿ ನಕಲಿ ವೆಬ್ ಸೈಟ್ ಅಭಿವೃದ್ಧಿಪಡಿಸಿದ್ದನ್ನು ಗಮನಿಸಿದ ಬಳಿಕ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ. 
SCROLL FOR NEXT