ಕಾಶ್ಮೀರ: ಶರಣಾದ ಉಗ್ರನನ್ನು ಬಂಧಿಸದೇ ಪೋಷಕರಿಗೆ ಒಪ್ಪಿಸಿದ ಭಾರತೀಯ ಸೇನೆ
ಭಯೋತ್ಪಾದನೆಯನ್ನು ತೊರೆದು ಸೇನಾಧಿಕಾರಿಗಳ ಮುಂದೆ ಶರಣಾಗಿದ್ದ ಉಗ್ರನೋರ್ವನನ್ನು ಬಂಧಿಸಿದೇ ಆತನ ಪೋಷಕರಿಗೆ ಒಪ್ಪಿಸುವ ಮೂಲಕ ಭಾರತೀಯ ಸೇನೆ ಮಾನವೀಯತೆ ಮೆರೆದಿದೆ.
ಶ್ರೀನಗರ: ಭಯೋತ್ಪಾದನೆಯನ್ನು ತೊರೆದು ಸೇನಾಧಿಕಾರಿಗಳ ಮುಂದೆ ಶರಣಾಗಿದ್ದ ಉಗ್ರನೋರ್ವನನ್ನು ಬಂಧಿಸಿದೇ ಆತನ ಪೋಷಕರಿಗೆ ಒಪ್ಪಿಸುವ ಮೂಲಕ ಭಾರತೀಯ ಸೇನೆ ಮಾನವೀಯತೆ ಮೆರೆದಿದೆ.
ಕಾಶ್ಮೀರ ಪೊಲೀಸರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಭದ್ರತಾ ದೃಷ್ಟಿಯಿಂದ ಶರಣಾದ ಸೈನಿಕನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. 'ಸಮುದಾಯದ ನೆರವಿನಿಂದ ಇಂದು ಮತ್ತೋರ್ವ ಉಗ್ರಗಾಮಿ ಸೇನೆಗೆ ಶರಣಾಗಿದ್ದಾನೆ. ಭದ್ರತಾ ಕಾರಣಗಳಿದ ಆತನ ಹಸೆರು, ಮೂಲಗ ಬಹಿರಂಗಗೊಳಿಸುತ್ತಿಲ್ಲ. ಆತನ ಇರುವಿಕೆಯ ಕುರಿತು ಗೌಪ್ಯತೆ ಮುಂದುವರೆಸಲಾಗಿದೆ ಎಂದು ಸೇನೆ ಹೇಳಿಕೊಂಡಿದೆ.
ಕಳೆದ ವರ್ಷ ಸೇನೆ ಆರಂಭಿಸಿದ್ದ ಕಾರ್ಯಾಚರಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಶರಣಾಗುವ ಉಗ್ರರನ್ನು ಬಂಧಿಸದೇ ಅವರ ತಮ್ಮ ಕುಟುಂಬಸ್ಥರೊಂದಿಗೆ ಸೇರಿ ಸುಖ ಜೀವನ ನಡೆಸಲು ಅನುವು ಮಾಡಿಕೊಡಲಾಗುತ್ತದೆ ಎಂದು ಘೋಷಿಸಿದ್ದರು. ಆ ಬಳಿಕ ಸುಮಾರು 15ಕ್ಕೂ ಹೆಚ್ಚು ಮಂದಿ ಸೇನೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.