ಕೆ ಜಿತುಕುಮಾರ್ ಮತ್ತು ಎಸ್ ವಿ ಶ್ರೀಕುಮಾರ್
ತಿರುವನಂತಪುರಂ: 2005ರಲ್ಲಿ ಪೋರ್ಟ್ ಪೋಲೀಸ್ ಠಾಣೆಯಲ್ಲಿ ನಡೆದಿದ್ದ ಉದಯಕುಮಾರ್ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಇಬ್ಬರು ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ
ಕೆ ಜಿತುಕುಮಾರ್ ಮತ್ತು ಎಸ್ ವಿ ಶ್ರೀಕುಮಾರ್, ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.ಪ್ರಕರೆಣದಲ್ಲಿ ಒಟ್ಟು ಆರು ಪೋಲೀಸರು ತಪ್ಪಿತಸ್ಥರಾಗಿದ್ದಾರೆ.
ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಜೆ. ನಾಸರ್ ಈ ಮರಣದಂಡನೆ ತೀರ್ಪು ಉಚ್ಚರಿಸಿದ್ದು ಇತರ ಮೂವರು ಪೊಲೀಸರಿಗೆ 3-5 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಇನ್ನು ಘಟನೆ ನಡೆದ ವೇಳೆ ಹೆಚ್ಚುವರಿ ಎಸ್ಐ ಆಗಿದ್ದ ಸೋಮನ್ಸಹ ಮೂರನೇ ಆರೋಪಿ ಎಂದು ಗುರುತಿಸಿಕೊಂಡಿದ್ದು ಇವರು ವಿಚಾರಣೆ ನಡುವೇ ಮರಣ ಹೊಂದಿದ್ದರು.
ಕಳ್ಳತನದ ಆರೋಪದ ಮೇಲೆ 27 ವರ್ಷದ ಉದಯಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸ್ ವಿಚಾರಣೆ ವೇಳೆಯೇ ಆರೋಪಿ ಮೃಅತನಾಗಿದ್ದನು..