ಸಂಗ್ರಹ ಚಿತ್ರ 
ದೇಶ

ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಸಾಹಸ, ಕಣ್ಣುಚ್ಚಿದ ತಾಯಿ; ನವಜಾತ ಶಿಶು ಗತಿ?

ಆಸ್ಪತ್ರೆಯ ಖರ್ಚು ಉಳಿಸಬಹುದೆಂದು ಪತಿಯೇ ತನ್ನ ನೆರೆಮನೆಯವರ ಜತೆ ಸೇರಿ ಪತ್ನಿಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಯಡವಟ್ಟಾಗಿದ್ದು ಮಹಿಳೆ ಮೃತಪಟ್ಟಿರುವ ದುರಂತ...

ಚೆನ್ನೈ: ಆಸ್ಪತ್ರೆಯ ಖರ್ಚು ಉಳಿಸಬಹುದೆಂದು ಪತಿಯೇ ತನ್ನ ನೆರೆಮನೆಯವರ ಜತೆ ಸೇರಿ ಪತ್ನಿಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಯಡವಟ್ಟಾಗಿದ್ದು ಮಹಿಳೆ ಮೃತಪಟ್ಟಿರುವ ದುರಂತ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಿರುವಣ್ಣಾಮಲೈ ಜಿಲ್ಲೆಯ ಪುದುಪಾಲ್ಯಂ ಸಮೀಪದ ರೈತನಗಿರೀಶ್ವರ್ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು 28 ವರ್ಷದ ಕೃತಿಕಾ ಎಂದು ಗುರುತಿಸಲಾಗಿದೆ. 
ಕೃತಿಕಾ ಪತಿ ಕಾರ್ತಿಕೇಯನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಈ ದಂಪತಿಗೆ ಈಗಾಗಲೇ ಮೂರು ವರ್ಷದ ಮಗಳಿದ್ದಾಳೆ. ಎರಡನೇ ಬಾರಿಗೆ ಗರ್ಭೀಣಿಯಾಗಿದ್ದ ಕೃತಿಗಾಳಿಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕಾರ್ತಿಕೇಯನ್ ತನ್ನ ಕುಟುಂಬ ಸ್ನೇಹಿತರಾದ ಪ್ರವೀಣ್ ಹಾಗೂ ಲಾವಣ್ಯ ದಂಪತಿ ಜೊತೆ ಸೇರಿ ಮನೆಯಲ್ಲೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. 
ಮೂವರು ಸೇರಿ ಯೂಟ್ಯೂಬ್ ನಲ್ಲಿ ಹೆರಿಗೆ ಮಾಡಿಸುವ ವಿಡಿಯೋವನ್ನು ನೋಡಿದ್ದಾರೆ. ಅದರಂತೆ ಕೃತಿಕಾಗೆ ಹೆರಿಗೆ ಮಾಡಿಸಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ ಕೃತಿಕಾ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. 
ಈ ಸಂಬಂಧ ಕಾರ್ತಿಕೇಯನ್ ಮತ್ತು ಪ್ರವೀಣ್-ಲಾವಣ್ಯ ದಂಪತಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

SCROLL FOR NEXT